×
Ad

ದೇವಸ್ಥಾನದಲ್ಲಿ ನೀರು ಕುಡಿದ ಬಾಲಕನಿಗೆ ಥಳಿತ: ಸಾಮಾಜಿಕ ತಾಣದಾದ್ಯಂತ 'SorryAsif' ಟ್ರೆಂಡಿಂಗ್‌

Update: 2021-03-14 13:15 IST

ಗಾಝಿಯಾಬಾದ್:‌ ದೇವಸ್ಥಾನ ಪ್ರವೇಶಿಸಿ ನೀರು ಕುಡಿದದ್ದಕ್ಕಾಗಿ ಮುಸ್ಲಿಂ ಬಾಲಕನೋರ್ವನಿಗೆ ಮನಬಂದಂತೆ ಥಳಿಸಿದ ಘಟನೆಯು ಉತ್ತರಪ್ರದೇಶದ ಗಾಝಿಯಾಬಾದ್‌ ನಲ್ಲಿ ನಡೆದಿತ್ತು. ಘಟನೆಯ ವೀಡಿಯೋ ಸಾಮಾಜಿಕ ತಾಣದಾದ್ಯಂತ ವೈರಲ್‌ ಆದ ಬಳಿಕ ಜನರಿಂದ ವ್ಯಾಪಕ ಆಕ್ರೋಶಕ್ಕೆ ಒಳಗಾಗಿತ್ತು. ಬಳಿಕ ಆರೋಪಿಯನ್ನು ಗಾಝಿಯಾಬಾದ್‌ ಪೊಲೀಸರು ಬಂಧಿಸಿದ್ದರು. ಇದೀಗ ಈ ಕುರಿತಾದಂತೆ ಸಾಮಾಜಿಕ ತಾಣದಾದ್ಯಂತ #sorryasif ಟ್ರೆಂಡಿಂಗ್‌ ಆಗಿದೆ. 

"ಸಾರ್ವಜನಿಕ ನೀರಿನ ಮೂಲಗಳನ್ನು ಬಳಸಿದ್ದಕ್ಕಾಗಿ ದಲಿತರನ್ನು ಥಳಿಸಲಾಗುತ್ತಿತ್ತು. ಈಗ ದೇವಸ್ಥಾನ ನೀರು ಕುಡಿದನೆಂದು ಮುಸಿಂ ಬಾಲಕನನ್ನು ಥಳಿಸಲಾಗಿದೆ. ಕೋಮುವಾದಿ ಅಸ್ಪೃಶ್ಯತೆಯು ಜೀವಂತವಾಗಿದೆ" ಎಂಧು ಕೇರಳದ ಮಹಿಳಾಪರ ಹೋರಾಟಗಾರ್ತಿ ಕವಿತಾ ಕೃಷ್ಣನ್‌ ಟ್ವೀಟ್‌ ಮಾಡಿದ್ದಾರೆ.

"ಈಗಿನ ಹೊಸ ಭಾರತದಲ್ಲಿ ಮಾನವೀಯತೆ ಮರೆಯಾಗುತ್ತಿದೆ. ಧರ್ಮವು ಮಾನವೀಯತೆಗಿಂತಲೂ ಮುಂದೆ ಸಾಗಿದೆ ಎಂಧು ಬಳಕೆದಾರರೋರ್ವರು ಕಳವಳ ವ್ಯಕ್ತಪಡಿಸಿದ್ದಾರೆ. "ವಸುದೈವ ಕುಟುಂಬಕಂ ಎಂಬ ಅರ್ಥಪೂರ್ಣ ನುಡಿಯನ್ನು ಪರಿಚಯಿಸಿದ ಭಾರತದಲ್ಲಿ ನೀರು ಕುಡಿಯಲೂ ಧರ್ಮವನ್ನು ಆಧಾರಿಸಲಾಗುತ್ತಿದೆ. ತಮ್ಮ ವಿರುದ್ಧ ನಡೆದ ಈ ಅನ್ಯಾಯಕ್ಕೆ ನಾವು ಕ್ಷಮೆ ಕೋರುತ್ತಿದ್ದೇವೆ ಎಂದು ಇನ್ನೋರ್ವ ಬಳಕೆದಾರರು ಟ್ವೀಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News