×
Ad

ವೀಲ್ ಚೇರ್ ನಲ್ಲಿ ರೋಡ್ ಶೋ ಆರಂಭಿಸಿದ ಮಮತಾ ಬ್ಯಾನರ್ಜಿ

Update: 2021-03-14 14:35 IST
PHOTO: ANI

ಕೋಲ್ಕತಾ: ನಂದಿಗ್ರಾಮದಲ್ಲಿ ಬಲಗಾಲು, ಎಡ ಭುಜ, ಅಂಗೈ ಹಾಗೂ ಕುತ್ತಿಗೆಗೆ ಗಾಯವಾದ ಬಳಿಕ ಕೋಲ್ಕತಾದ ಎಸ್ ಎಸ್ ಕೆಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಿಡುಗಡೆಯಾದ ಎರಡು ದಿನಗಳ ಬಳಿಕ ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇಂದು ವೀಲ್ಡ್ ಚೇರ್ ನಲ್ಲೇ ಕೋಲ್ಕತಾದ ಗಾಂಧಿ ಮೂರ್ತಿಯಿಂದ ಹಝ್ರಾದ ತನಕ ರೋಡ್ ಶೋ ಆರಂಭಿಸಿದ್ದಾರೆ. ರ್ಯಾಲಿಯ ಅಂತ್ಯದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುವ ನಿರೀಕ್ಷೆಯಿದೆ.

ಮಮತಾ ಅವರು ಕೋಲ್ಕತಾದ ಗಾಂಧಿ ಮೂರ್ತಿ ಬಳಿ ಆಗಮಿಸುವ ಮೊದಲೇ ನೂರಾರು ಟಿಎಂಸಿ ನಾಯಕರು ಹಾಗೂ ಬೆಂಬಲಿಗರು ಅಲ್ಲಿ ಜಮಾಯಿಸಿದ್ದರು.

ಮಮತಾ ಅವರು ಕಳೆದ ವಾರ ನಂದಿಗ್ರಾಮಕ್ಕೆ ಭೇಟಿ ನೀಡಿದಾಗ ಅವರ ಮೇಲೆ ದಾಳಿ ನಡೆದಿರುವುದ್ದಕ್ಕೆ ಯಾವುದೆ ಪುರಾವೆ ಇಲ್ಲ. ಇದೊಂದು ಆಕಸ್ಮಿಕ ಘಟನೆ ಎಂದು ಚುನಾವಣಾ ಆಯೋಗವು ಚುನಾವಣಾ ವೀಕ್ಷಕರ ವರದಿಯನ್ನು ಆಧರಿಸಿ ತಿಳಿಸಿದೆ. 

ಮಮತಾ ಅವರ ಆರೋಗ್ಯ ವಿಚಾರವು ಬಂಗಾಳದ ರಾಜಕೀಯ ವಲಯದಲ್ಲಿ ಚರ್ಚೆಯ ವಿಚಾರವಾಗಿದೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News