"ಗಾಯಗೊಂಡ ಹುಲಿ ಅತೀ ಅಪಾಯಕಾರಿ": ಮಮತಾ ಬ್ಯಾನರ್ಜಿ ಹೇಳಿಕೆ

Update: 2021-03-14 12:02 GMT

ಕೋಲ್ಕತ್ತಾ: ಕಾಲಿಗೆ ಬಲವಾದ ಗಾಯಗಳಾಗಿ ಆಸ್ಪತ್ರೆಯಲ್ಲಿ ವಿಶ್ರಾಂತಿ ಪಡೆದ ಬಳಿಕ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್‌ ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಮತ್ತೆ ಪ್ರಚಾರ ಕಾರ್ಯಗಳಿಗೆ ಹಿಂದಿರುಗಿದ್ದಾರೆ. ವ್ಹೀಲ್‌ ಚೇರ್‌ ನಲ್ಲೇ ಕುಳಿತು ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು ಕೇಂದ್ರ ಸರಕಾರ ಹಾಗೂ ಬಿಜೆಪಿ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು.

ಪ್ರಚಾರ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಮಮತಾ ಬ್ಯಾನರ್ಜಿ, "ಜನರು ನಮ್ಮ ಪಕ್ಷಕ್ಕೆ ಮತ ಹಾಕಿದರೆ ಪ್ರಜಾಪ್ರಭುತ್ವವನ್ನು ಅವರಿಗೆ ಮರಳಿಸಲು ಸಾಧ್ಯವಾಗುತ್ತದೆ. ಬಂಗಾಳದ ವಿರುದ್ಧ ಸೃಷ್ಟಿಸಿರುವ ಎಲ್ಲಾ ಸಂಶಯಗಳು, ವಿವಾದಗಳು ಮತ್ತು ಅಪಪ್ರಚಾರಗಳು ಕೊನೆಗೊಳ್ಳಲಿವೆ. ನನ್ನ ಕಾಲು ಮುರಿದರೂ ನಾನು ವ್ಹೀಲ್‌ ಚೇರ್‌ ಬಳಸಿಕೊಂಡು ಪ್ರಚಾರ ಕಾರ್ಯಕ್ರಮಗಳನ್ನು ನಡೆಸುತ್ತೇನೆ. ಖೇಲಾ ಹೋಬೆ... ಗಾಯಗೊಂಡ ಹುಲಿಯು ಅತಿ ಅಪಾಯಕಾರಿ ಪ್ರಾಣಿಯಾಗಿದೆ ಎಂದು ಈ ಸಂದರ್ಭದಲ್ಲಿ ನಾನು ಉಲ್ಲೇಖಿಸುತ್ತಿದ್ದೇನೆ" ಎಂದು ಮಮತಾ ಬ್ಯಾನರ್ಜಿ ಬಿಜೆಪಿ ಸೇರಿದಂತೆ ಪ್ರಮುಖ ವಿರೋಧ ಪಕ್ಷಗಳಿಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News