×
Ad

ಕನ್ಹಯ್ಯ ಕುಮಾರ್, ಉಮರ್ ಖಾಲಿದ್ ಸೇರಿದಂತೆ ಹಲವರಿಗೆ ʼದೇಶದ್ರೋಹʼದ ಚಾರ್ಜ್ ಶೀಟ್ ಪ್ರತಿ ನೀಡುವಂತೆ ಕೋರ್ಟ್‌ ಆದೇಶ

Update: 2021-03-15 12:05 IST

ಹೊಸದಿಲ್ಲಿ: 2016 ರ ʼದೇಶದ್ರೋಹʼ ಪ್ರಕರಣದಲ್ಲಿ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (ಜೆಎನ್‌ಯು) ಕನ್ಹಯ್ಯ ಕುಮಾರ್, ಉಮರ್ ಖಾಲಿದ್ ಮತ್ತು ಇತರ ಎಂಟು ಮಂದಿಗೆ ಅವರ ವಿರುದ್ಧ ದಾಖಲಾದ ಚಾರ್ಜ್‌ಶೀಟ್‌ನ ಪ್ರತಿಗಳನ್ನು ಒದಗಿಸುವಂತೆ ದೆಹಲಿಯ ಸ್ಥಳೀಯ ನ್ಯಾಯಾಲಯ ಸೋಮವಾರ ಪೊಲೀಸರಿಗೆ ನಿರ್ದೇಶನ ನೀಡಿದೆ. ಕ್ಯಾಂಪಸ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾರತ ವಿರೋಧಿ ಘೋಷಣೆಗಳನ್ನು ಕೂಗಿದ್ದಾರೆ ಎಂಬ ಆರೋಪದ ಮೇರೆಗೆ ಅವರ ವಿರುದ್ಧ ದೇಶದ್ರೋಹ ಮತ್ತು ಇತರ ಆರೋಪಗಳನ್ನು ದಾಖಲಿಸಲಾಗಿದೆ.

ಕನ್ಹಯ್ಯ ಕುಮಾರ್ ಮತ್ತು ಇತರರು ಹೆಚ್ಚಿನ ಭದ್ರತೆಯ ಮಧ್ಯೆ ಪಟಿಯಾಲ ಹೌಸ್ ನ್ಯಾಯಾಲಯಕ್ಕೆ ತಲುಪಿದರು.

ದೆಹಲಿ ಪೊಲೀಸರ ವಿಶೇಷ ತಂಡವು 1,200 ಪುಟಗಳ ಚಾರ್ಜ್‌ಶೀಟ್ ಅನ್ನು ನಗರ ನ್ಯಾಯಾಲಯಕ್ಕೆ 2019 ರ ಜನವರಿ 14 ರಂದು ಸಲ್ಲಿಸಿ, ಈ ಪ್ರಕರಣದಲ್ಲಿ ಕನ್ಹಯ್ಯ ಕುಮಾರ್, ಉಮರ್ ಖಾಲಿದ್, ಅನಿರ್ಬನ್ ಭಟ್ಟಾಚಾರ್ಯ ಮತ್ತು ಇತರರನ್ನು ಹೆಸರಿಸಿದೆ.

‌ಕನ್ಹಯ್ಯ ಕುಮಾರ್ ಮತ್ತು ಖಾಲಿದ್, "ನಮ್ಮ ವಿರುದ್ಧದ ಪೊಲೀಸ್ ಕ್ರಮವು ರಾಜಕೀಯ ಪ್ರೇರಿತವಾಗಿದೆ" ಎಂದು ಆರೋಪಿಸಿದ್ದಾರೆ.

ಕಾಶ್ಮೀರಿ ವಿದ್ಯಾರ್ಥಿಗಳಾದ ಅಕ್ವಿಬ್ ಹುಸೈನ್, ಮುಜೀಬ್ ಹುಸೈನ್, ಮುನೀಬ್ ಹುಸೈನ್, ಉಮರ್ ಗುಲ್, ರಾಯಿಯಾ ರಸ್ಸೋಲ್, ಬಶೀರ್ ಭಟ್ ಮತ್ತು ಬಶರತ್ ಎಂಬವರ ಹೆಸರನ್ನೂ ಚಾರ್ಜ್‌ ಶೀಟ್‌ ನಲ್ಲಿ ಉಲ್ಲೇಖಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News