ಬ್ಯಾಂಕ್‌ಗಳನ್ನು ಖಾಸಗಿ ವ್ಯಕ್ತಿಗಳಿಗೆ ನೀಡಿದರೆ ದೇಶದಲ್ಲಿ ಅನಾಹುತವಾಗಲಿದೆ: ಸಂಸದ ಮಾಣಿಕ ಟಾಗೋರ್

Update: 2021-03-16 18:22 GMT
Photo: twitter.com/manickatagore

 ಹೊಸದಿಲ್ಲಿ, ಮಾ. 16: ಸಾರ್ವಜನಿಕ ವಲಯದ ಬ್ಯಾಂಕ್‌ಗಳನ್ನು ಖಾಸಗೀಕರಣಗೊಳಿಸುವ ಮೂಲಕ ಬ್ಯಾಂಕಿಂಗ್ ಉದ್ಯಮದ ಬೆನ್ನು ಮೂಳೆ ಮುರಿಯಲು ಕೇಂದ್ರ ಸರಕಾರ ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್ ಸಂಸದ ಮಾಣಿಕ ಟಾಗೋರ್ ಹೇಳಿದ್ದಾರೆ.

ಮೋದಿ ಸರಕಾರದ ಬ್ಯಾಂಕ್‌ಗಳ ಖಾಸಗೀಕರಣದ ವಿರುದ್ಧ ಬ್ಯಾಂಕ್ ಸಂಘಟನೆಗಳು ಮುಷ್ಕರ ನಡೆಸುತ್ತಿವೆ. ಕೇಂದ್ರ ಸರಕಾರದ ಬ್ಯಾಂಕಿಂಗ್ ಉದ್ಯಮದ ಬೆನ್ನು ಮೂಳೆ ಮುರಿಯ ಹೊರಟಿರುವುದು ದುರಾದೃಷ್ಟಕರ ಎಂದು ಟಾಗೋರ್ ಹೇಳಿದ್ದಾರೆ.

 ಭಾರತೀಯ ಬ್ಯಾಂಕಿಂಗ್ ವ್ಯವಸ್ಥೆ 2008ರಲ್ಲಿ ಆರ್ಥಿಕ ಹಿಂಜರಿತದಿಂದ ಹೊರ ಬಂದಿರುವುದು ನಮಗೆ ಗೊತ್ತಿದೆ. ಬ್ಯಾಂಕಿಂಗ್ ವ್ಯವಸ್ಥೆಯ ನಿಯಂತ್ರಣ ಹಾಗೂ ಸಮತೋಲನದೊಂದಿಗೆ ರಾಷ್ಟ್ರೀಕರಣಗೊಂಡಿರುವುದು ಇದಕ್ಕೆ ಮುಖ್ಯ ಕಾರಣ ಎಂದು ಅವರು ಹೇಳಿದ್ದಾರೆ.

ಉದ್ಯಮ ನಡೆಸುತ್ತಿರುವ ಗೆಳೆಯರಿಗೆ ಈ ಬ್ಯಾಂಕ್‌ಗಳನ್ನು ನೀಡಲು ಕೇಂದ್ರ ಸರಕಾರ ಪ್ರಯತ್ನಿಸುತ್ತಿದೆ. ಬ್ಯಾಂಕ್‌ಗಳನ್ನು ಖಾಸಗಿ ವ್ಯಕ್ತಿಗಳಿಗೆ ನೀಡಿದರೆ, ಅದರಿಂದ ದೇಶದಲ್ಲಿ ಅನಾಹುತವಾಗಲಿದೆ ಎಂದು ಟಾಗೋರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News