ಗುಜರಾತ್: ಮಾರ್ಚ್ 17ರಿಂದ 4 ನಗರಗಳಲ್ಲಿ ರಾತ್ರಿ ಕರ್ಫ್ಯೂ ವಿಸ್ತರಣೆ

Update: 2021-03-16 18:25 GMT

ಗಾಂಧಿನಗರ, ಮಾ. 16: ನಾಲ್ಕು ಮೆಟ್ರೋಪಾಲಿಟಿನ್ ನಗರಗಳಾದ ಅಹ್ಮದಾಬಾದ್, ಸೂರತ್, ವಡೋದರಾ ಹಾಗೂ ರಾಜಕೋಟ್‌ನಲ್ಲಿ ಜಾರಿಗೊಳಿಸಲಾದ ರಾತ್ರಿ ಕರ್ಫ್ಯೂವನ್ನು ಗುಜರಾತ್ ಸರಕಾರ ಮಾರ್ಚ್ 17ರಿಂದ ವಿಸ್ತರಿಸಲಿದೆ.

ಕರ್ಫ್ಯೂವನ್ನು ಈ ಹಿಂದಿನ ರಾತ್ರಿ 12 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೆ ಬದಲಿಗೆ ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೆ ನಿಗದಿಗೊಳಿಸಲಾಗಿದೆ.

ಈ ಹೊಸ ಸಮಯ ಮಾರ್ಚ್ 31ರಿಂದ ಅನ್ವಯವಾಗಲಿದೆ ಎಂದು ಮುಖ್ಯಮಂತ್ರಿ ವಿಜಯ್ ರೂಪಾನಿ ಅವರ ಕಚೇರಿಯ ಟ್ವೀಟ್ ಹೇಳಿದೆ.

ರಾಜ್ಯದಲ್ಲಿ ಕೊರೋನ ಸೋಂಕಿನ ಪ್ರಕರಣಗಳಲ್ಲಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕೊರೋನ ವೈರಸ್ ಕ್ಷಿಪ್ರ ಕಾರ್ಯ ಪಡೆಯ ಮುಖ್ಯ ಸಮಿತಿಯ ಸಭೆ ಇಂದು ಬೆಳಗ್ಗೆ ವಿಜಯ್ ರೂಪಾನಿ ನೇತೃತ್ವದಲ್ಲಿ ನಡೆಯಿತು.

ಕರ್ಫ್ಯೂ ಹೇರಲಾದ ಸಮಯದಲ್ಲಿ ಜನರು ಸಂಚರಿಸುವಂತಿಲ್ಲ ಹಾಗೂ ಅಂಗಡಿ, ರೆಸ್ಟೋರೆಂಟ್, ಮಾಲ್‌ಗಳು ತೆರೆಯುವಂತಿಲ್ಲ. ಆದರೆ, ಮೆಡಿಕಲ್, ಆಸ್ಪತ್ರೆ ಹಾಗೂ ಇತರ ಅಗತ್ಯದ ಸೇವೆಗಳು ಲಭ್ಯವಿರಲಿದೆ. ರೈಲು ಅಥವಾ ವಿಮಾನಗಳಲ್ಲಿ ಪ್ರಯಾಣಿಸುವವರಿಗೆ ತೆರಳಲು ಅವಕಾಶ ನೀಡಲಾಗುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News