ಬಂಧನದಲ್ಲಿರುವ ರೊಹಿಂಗ್ಯಾಗಳ ಬಿಡುಗಡೆ ಕೋರಿ ಸಲ್ಲಿಸಿದ ಮನವಿ ವಿಚಾರಣೆಗೆ ಸುಪ್ರೀಂಕೋರ್ಟ್ ಅಸ್ತು

Update: 2021-03-18 14:18 GMT

ಹೊಸದಿಲ್ಲಿ, ಮಾ. 17: ಜಮ್ಮು ಹಾಗೂ ಕಾಶ್ಮೀರದಲ್ಲಿ ಬಂಧನಕ್ಕೊಳಗಾದ ರೊಹಿಂಗ್ಯಾಗಳನ್ನು ಕೂಡಲೇ ಬಿಡುಗಡೆ ಮಾಡುವಂತೆ ಕೋರಿ ಸಲ್ಲಿಸಲಾದ ಮನವಿಯ ವಿಚಾರಣೆಯನ್ನು ಕೈಗೆತ್ತಿಕೊಳ್ಳಲು ಸುಪ್ರೀಂ ಕೋರ್ಟ್ ಗುರುವಾರ ಒಪ್ಪಿಕೊಂಡಿದೆ. ಅಲ್ಲದೆ, ಅವರನ್ನು ಮತ್ತೆ ಮ್ಯಾನ್ಮಾರ್‌ಗೆ ಗಡಿಪಾರು ಮಾಡುವುದನ್ನು ತಡೆಯಲು ನಿರ್ದೇಶನ ನೀಡಿದೆ.

ಸುಪ್ರೀಂ ಕೋರ್ಟ್ ಮನವಿಯ ವಿಚಾರಣೆಯನ್ನು ಮಾರ್ಚ್ 25ರಂದು ನಡೆಸಲಿದೆ. ರೊಹಿಂಗ್ಯಾ ನಿರಾಶ್ರಿತ ಮುಹಮ್ಮದ್ ಸಲಿಮುಲ್ಲಾಹ್ ನ್ಯಾಯವಾದಿ ಪ್ರಶಾಂತ್ ಭೂಷಣ್ ಅವರ ಮೂಲಕ ಸಲ್ಲಿಸಿದ ಮನವಿಯಲ್ಲಿ, ಈ ವಲಸಿಗರನ್ನು ಕಾನೂನುಬಾಹಿರವಾಗಿ ವಶಕ್ಕೆ ತೆಗೆದುಕೊಳ್ಳಲಾಗಿದೆ ಹಾಗೂ ಜಮ್ಮುವಿನ ಸಬ್‌ಜೈಲ್‌ನಲ್ಲಿ ಇರಿಸಲಾಗಿದೆ ಎಂದು ಹೇಳಿದೆ. ಈ ನಡೆ ಭಾರತದಲ್ಲಿ ವಾಸಿಸುತ್ತಿರುವ ಎಲ್ಲ ರೋಹಿಂಗ್ಯಾ ವ್ಯಕ್ತಿಗಳ ಕಲಂ 21ರ ಹಕ್ಕುಗಳ ಉಲ್ಲಂಘನೆ ಹಾಗೂ ಅವರು ಕಿರುಕುಳ ಎದುರಿಸುತ್ತಿರುವ ಸ್ಥಳಕ್ಕೆ ಗಡಿಪಾರು ಮಾಡುವುದರ ವಿರುದ್ಧದ ಕಟ್ಟುಪಾಡುಗಳು ಹಾಗೂ ವಲಸಿಗರ ರಕ್ಷಣೆಯ ಭಾರತದ ಬದ್ಧತೆಗೆ ವಿರುದ್ಧವಾದುದು ಎಂದು ಮನವಿಯಲ್ಲಿ ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News