ಜೆಮ್ಶೆದ್‌ಪುರ: ಕೋವಿಶೀಲ್ಡ್ ಲಸಿಕೆ ಹಾಕಿಸಿಕೊಂಡ ವೈದ್ಯರಿಗೆ ಕೊರೋನ
Update: 2021-03-18 21:48 IST
ಜೆಮ್ಶೆದ್‌ಪುರ, ಮಾ. 17: ಎರಡು ಹಂತಗಳ ಕೊರೋನ ಲಸಿಕೆ ಕೋವಿಶೀಲ್ಡ್ ಹಾಕಿಸಿಕೊಂಡ ಜೆಮ್ಶೆದ್‌ಪುರದ ಮಹಾತ್ಮಾ ಗಾಂಧಿ ಸ್ಮಾರಕ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯ ವೈದ್ಯರೊಬ್ಬರು ಕೊರೋನ ಸೋಂಕಿಗೆ ಒಳಗಾಗಿದ್ದಾರೆ.
ಅವರ ಪತ್ನಿ ಕೂಡ ಕೊರೋನ ಸೋಂಕಿಗೆ ಒಳಗಾಗಿದ್ದಾರೆ.ಆದರೆ, ಅವರು ಇದುವರೆಗೆ ಕೊರೋನ ಲಸಿಕೆ ಹಾಕಿಸಿಕೊಂಡಿಲ್ಲ. ರೋಗ ಲಕ್ಷಣ ಇಲ್ಲದ ವೈದ್ಯ ದಂಪತಿಯನ್ನು ಅವರ ನಿವಾಸದಲ್ಲೇ ಐಸೋಲೇಶನ್‌ನಲ್ಲಿ ಇರಿಸಲಾಗಿದೆ. ಅಲ್ಲದೆ, 24 ಗಂಟೆಗಳ ಕಾಲವೂ ನಿಗಾ ಇರಿಸಲಾಗಿದೆ ಎಂದು ಜಿಲ್ಲಾ ನೋಡಲ್ ಅಧಿಕಾರಿ ಹಾಗೂ ಹೆಚ್ಚುವರಿ ಮುಖ್ಯ ವೈದ್ಯಾಧಿಕಾರಿ ಡಾ. ಶಾಹಿರ್ ಪಾಲ್ ಹೇಳಿದ್ದಾರೆ.
ಪ್ರಾಥಮಿಕ ಪರೀಕ್ಷೆಯಲ್ಲಿ ವೈದ್ಯರ ಪತ್ನಿಯ ಎದೆಯಲ್ಲಿ ಕೆಲವು ಗೆರೆಗಳು ಕಂಡು ಬಂದಿವೆ. ಅವರಿಗೆ ಹೋಲಿಸಿದರೆ ಕ್ಯಾನ್ಸರ್ ರೋಗಿಯಾಗಿರುವ ವೈದ್ಯರ ಆರೋಗ್ಯ ಚೆನ್ನಾಗಿದೆ ಎಂದು ಅವರು ತಿಳಿಸಿದ್ದಾರೆ.