ವಿಶ್ವದಾದ್ಯಂತ ವಾಟ್ಸ್ಯಾಪ್‌ ಮತ್ತು ಇನ್‌ ಸ್ಟಾಗ್ರಾಂ ಸೇವೆಯಲ್ಲಿ ವ್ಯತ್ಯಯ

Update: 2021-03-19 17:41 GMT

ಹೊಸದಿಲ್ಲಿ: ಜನಪ್ರಿಯ ಸಾಮಾಜಿಕ ತಾಣಗಳಾದ ವಾಟ್ಸ್ಯಾಪ್‌ ಮತ್ತು ಇನ್ಸ್ಟಾ ಗ್ರಾಂ ಅಪ್ಲಿಕೇಶನ್‌ ಗಳು ಸದ್ಯ ತಾತ್ಕಾಲಿಕ ಸ್ಥಗಿತಗೊಂಡಿದೆ ಎಂದು ತಿಳಿದು ಬಂದಿದೆ. ವಿಶ್ವದಾದ್ಯಂತ ಈ ಸಮಸ್ಯೆ ಎದುರಾಗಿದ್ದು, ಹಲವಾರು ಬಳಕೆದಾರರು ಸದ್ಯ ಈ ವಿಷಯವನ್ನು ತಿಳಿಸಲು ಟ್ವಿಟರ್‌ ಮೊರೆ ಹೋಗುತ್ತಿದ್ದಾರೆ.

ಈಗಾಗಲೇ ಭಾರತ, ಪಾಕಿಸ್ತಾನ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಈ ಎರಡು ಅಪ್ಲಿಕೇಶನ್‌ ಬಳಕೆಯಲ್ಲಿ ವ್ಯತ್ಯಯ ಕಂಡು ಬಂದಿದೆ. ಇದೊಂದು ತಾತ್ಕಾಲಿಕ ಸಮಸ್ಯೆಯಾಗಿರಬಹುದು ಎಂದು ಮೇಲ್ನೋಟಕ್ಕೆ ಅಂದಾಜಿಸಲಾಗಿದ್ದು, ಈ ಕುರಿತು ಸಂಸ್ಥೆಯ ಕಡೆಯಿಂದ ಅಧಿಕೃತ ಹೇಳಿಕೆಗಳು ಇನ್ನೂ ಬಂದಿಲ್ಲ. ಸದ್ಯ ಟ್ವಿಟರ್‌ ನಲ್ಲಿ ವಾಟ್ಸ್ಯಾಪ್‌ ಡೌನ್‌ ಎಂಬ ಹ್ಯಾಶ್‌ ಟ್ಯಾಗ್‌ ಟ್ರೆಂಡಿಂಗ್‌ ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News