×
Ad

ಅಮೆರಿಕ: ವಿದೇಶಿ ವಿದ್ಯಾರ್ಥಿಗಳ ಪೈಕಿ 47 ಶೇ. ಭಾರತ, ಚೀನೀಯರು

Update: 2021-03-20 21:18 IST
ಸಾಂದರ್ಬಿಕ ಚಿತ್ರ

ವಾಶಿಂಗ್ಟನ್, ಮಾ. 20: ಅಮೆರಿಕದಲ್ಲಿ 2020ರಲ್ಲಿ ಕಲಿಯುತ್ತಿದ್ದ ವಿದೇಶಿ ವಿದ್ಯಾರ್ಥಿಗಳ ಪೈಕಿ ಭಾರತ ಮತ್ತು ಚೀನಾಗಳ ವಿದ್ಯಾರ್ಥಿಗಳೇ 47 ಶೇಕಡದಷ್ಟಿದ್ದರು ಎಂದು ಇತ್ತೀಚಿನ ಅಧಿಕೃತ ಅಂಕಿ ಸಂಖ್ಯೆಗಳು ತಿಳಿಸಿವೆ.

ಅದೇ ವೇಳೆ, ಕೊರೋನ ವೈರಸ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ, ಹೊಸದಾಗಿ ಸೇರ್ಪಡೆಗೊಳ್ಳುವ ವಿದೇಶಿ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಗಮನಾರ್ಹ ಕಡಿತವುಂಟಾಗಿದೆ ಎಂದು ಸ್ಟೂಡೆಂಟ್ ಆ್ಯಂಡ್ ಎಕ್ಸ್‌ಚೇಂಜ್ ವಿಸಿಟರ್ ಪ್ರೋಗ್ರಾಮ್ (ಎಸ್‌ಇವಿಪಿ)ನ ವಾರ್ಷಿಕ ವರದಿ ತಿಳಿಸಿದೆ.

2020 ಕ್ಯಾಲೆಂಡರ್ ವರ್ಷದಲ್ಲಿ 12.5 ಲಕ್ಷ ವಿದೇಶಿ ವಿದ್ಯಾರ್ಥಿಗಳು ಅಮೆರಿಕದ ವಿಶ್ವವಿದ್ಯಾನಿಲಯಗಳಲ್ಲಿ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಂಡಿದ್ದರು. 2019ರ ಕ್ಯಾಲೆಂಡರ್ ವರ್ಷಕ್ಕೆ ಹೋಲಿಸಿದರೆ ಇದು 17.86 ಶೇಕಡ ಕಡಿಮೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News