×
Ad

ಕೇರಳದಲ್ಲಿ ಮೂವರು ಎನ್‌ಡಿಎ ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತ: ಬಿಜೆಪಿಗೆ ಹಿನ್ನಡೆ

Update: 2021-03-22 13:37 IST

ತಿರುವನಂತಪುರ: ಕೇರಳದ ಮೂರು ಕ್ಷೇತ್ರಗಳಲ್ಲಿ ಎನ್ ಡಿಎ ಅಭ್ಯರ್ಥಿಗಳು  ವಿಧಾನಸಭಾ ಚುನಾವಣೆಗಾಗಿ ಸಲ್ಲಿಸಿರುವ ನಾಮಪತ್ರಗಳನ್ನು ರಿಟರ್ನಿಂಗ್ ಅಧಿಕಾರಿ ತಿರಸ್ಕರಿಸಿದ್ದು ಈ ಕ್ರಮವು ಬಿಜೆಪಿಗೆ ಹಿನ್ನಡೆಯಾಗಿದೆ.

ತಲಶೇರಿ  ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಅಭ್ಯರ್ಥಿ, ಪಕ್ಷದ ಕಣ್ಣೂರು ಘಟಕದ ಅಧ್ಯಕ್ಷ ಎನ್.ಹರಿದಾಸ್ ಸಲ್ಲಿಸಿರುವ ನಾಮಪತ್ರ ಅರ್ಜಿ ತಿರಸ್ಕøತವಾಗಿದೆ. ಅಭ್ಯರ್ಥಿ ಸಲ್ಲಿಸಿರುವ ಅರ್ಜಿಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಅವರ ಸಹಿ ಇಲ್ಲ ಎಂಬ ಕಾರಣಕ್ಕೆ ರಿಟರ್ನಿಂಗ್ ಅಧಿಕಾರಿ ನಾಮಪತ್ರವನ್ನು ತಿರಸ್ಕರಿಸಿದ್ದಾರೆ.

ಗುರುವಾಯೂರು ವಿಧಾನಸಭಾಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಮಹಿಳಾ ಮೋರ್ಚಾದ ರಾಜ್ಯಾಧ್ಯಕ್ಷೆ ನಿವೇದಿತಾ ಸುಬ್ರಮಣಿಯಂ ಸಲ್ಲಿಸಿರುವ  ನಾಮಪತ್ರವೂ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಅವರ ಸಹಿ ಇಲ್ಲ ಎಂಬ ಕಾರಣಕ್ಕೆ ತಿರಸ್ಕøತವಾಗಿದೆ.

ಇಡುಕ್ಕಿವಿನ ದೇವಿಕುಲಂನಲ್ಲಿ ಎಐಎಡಿಎಂಕೆ ಅಭ್ಯರ್ಥಿ ಧನಲಕ್ಷ್ಮೀ ಸಲ್ಲಿಸಿರುವ ನಾಮಪತ್ರದ ಅರ್ಜಿ ಅಪೂರ್ಣವಾಗಿದೆ ಎಂಬ ಕಾರಣಕ್ಕೆ ತಿರಸ್ಕರಿಸಲಾಗಿದೆ. ದೇವಿಕುಲಮ್ ನಲ್ಲಿ ಎಐಎಡಿಎಂಕೆಗೆ ಬಿಜೆಪಿ ಬೆಂಬಲ ನೀಡುತ್ತಿದೆ.

ಎಪ್ರಿಲ್ 6ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ಸಲ್ಲಿಸಿರುವ ಅರ್ಜಿಯನ್ನು ತಿರಸ್ಕರಿಸಿರುವ ರಿಟರ್ನಿಂಗ್ ಅಧಿಕಾರಿಯ ನಿರ್ಧಾರವನ್ನು ಪ್ರಶ್ನಿಸಿ ಬಿಜೆಪಿಯ ಇಬ್ಬರು ಅಭ್ಯರ್ಥಿಗಳು ಸಲ್ಲಿಸಿರುವ ದೂರಿಗೆ ಸಂಬಂಧಿಸಿ ಕೇರಳ ಹೈಕೋರ್ಟ್ ರವಿವಾರ ಚುನಾವಣಾ ಆಯೋಗದಿಂದ ಉತ್ತರವನ್ನು ಕೋರಿದೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News