×
Ad

ಗೃಹ ಸಚಿವ ಅನಿಲ್ ದೇಶ್ ಮುಖ್ ವಿರುದ್ಧ ಭ್ರಷ್ಟಾಚಾರ ಆರೋಪ ನಿರಾಕರಿಸಿದ ಶರದ್ ಪವಾರ್

Update: 2021-03-22 15:01 IST

ಮುಂಬೈ: ರಾಜ್ಯ ಗೃಹ ಸಚಿವ ಅನಿಲ್ ದೇಶ್ ಮುಖ್ ವಿರುದ್ಧ ಮಾಜಿ ಮುಂಬೈ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್ ಮಾಡಿರುವ  ಭ್ರಷ್ಟಾಚಾರದ ಆರೋಪವು ತಪ್ಪು ಎಂದು ಎನ್ ಸಿಪಿ ಶರದ್ ಪವಾರ್ ಸೋಮವಾರ ಹೇಳಿದ್ದಾರೆ.

ಮುಖೇಶ್ ಅಂಬಾನಿಗೆ ಬಾಂಬ್ ಭೀತಿ ಪ್ರಕರಣಕ್ಕೆ ಸಂಬಂಧಿಸಿ ಎನ್ ಐಎಯಿಂದ ಬಂಧಿಸಲ್ಪಟ್ಟಿರುವ ಪೊಲೀಸ್ ಅಧಿಕಾರಿ ಸಚಿನ್ ವಾಝೆ ಅವರನ್ನು ಗೃಹ ಸಚಿವರು ಭೇಟಿಯಾಗಿದ್ದಾರೆ ಎಂದು ಪರಮ್ ಬೀರ್ ಸಿಂಗ್ ಹೇಳಿದ್ದ ಅವಧಿಯಲ್ಲಿ ದೇಶ್ ಮುಖ್ ಅವರು ಕೋವಿಡ್-19ನಿಂದಾಗಿ ಆಸ್ಪತ್ರೆಯಲ್ಲಿದ್ದರು ಎಂದು ಪವಾರ್ ಹೇಳಿದರು.

ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ 8 ಪುಟಗಳ ಪತ್ರವನ್ನು ಬರೆದಿದ್ದ ಸಿಂಗ್, ದೇಶ್‍ಮುಖ್ ಅವರು ಸಚಿನ್ ವಾಝೆ ಅವರಿಗೆ ಪ್ರತಿ ತಿಂಗಳು 100 ಕೋ.ರೂ. ವಸೂಲು ಮಾಡಲು ಆದೇಶಿಸಿದ್ದರು ಎಂದು ಆರೋಪಿಸಿದ್ದರು. ಸಿಂಗ್ ಅವರ ಆರೋಪವನ್ನು ನಿರಾಕರಿಸಿರುವ ದೇಶ್ ಮುಖ್,  ಪರಮ್ ಬೀರ್ ಸಿಂಗ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುವಾಗಿ ಹೇಳಿದ್ದರು.

ನೀವು ಮಾಜಿ ಪೊಲೀಸ್ ಆಯುಕ್ತರ ಪತ್ರವನ್ನು ನೋಡಿದರೆ, ಗೃಹ ಸಚಿವರು ಫೆಬ್ರವರಿ ಮಧ್ಯಭಾಗದಲ್ಲಿ ತಮಗೆ ಅಂತಹ ಸೂಚನೆ ನೀಡಿದ್ದಾರೆ ಎಂದು ಕೆಲವು ಅಧಿಕಾರಿಗಳು ತನಗೆ ಮಾಹಿತಿ ನೀಡಿದ್ದಾಗಿ ಸಿಂಗ್ ಹೇಳಿದ್ದಾರೆ. ಆದರೆ ಫೆಬ್ರವರಿ 5ರಿಂದ 15ರ ತನಕ ದೇಶ್ ಮುಖ್ ಕೋವಿಡ್-19ನಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಫೆಬ್ರವರಿ 15ರಿಂದ 27ರ ತನಕ ಕ್ವಾರಂಟೈನ್ ನಲ್ಲಿದ್ದರು ಎಂದು ಪವಾರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News