×
Ad

ಸುಶಾಂತ್ ಸಿಂಗ್ ರಜಪೂತ್ ನಟನೆಯ ‘ಚಿಚೋರೆ’ಗೆ ಶ್ರೇಷ್ಠ ಹಿಂದಿ ಚಿತ್ರ ಪ್ರಶಸ್ತಿ

Update: 2021-03-22 17:57 IST

ಹೊಸದಿಲ್ಲಿ: ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ನಟನೆಯ 'ಚಿಚೋರೆ'  67ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಶ್ರೇಷ್ಠ ಹಿಂದಿ ಚಿತ್ರ ಪ್ರಶಸ್ತಿಯನ್ನು ಪಡೆದಿದೆ.

2020ರ ಜೂನ್ 14ರಂದು ಮುಂಬೈನ ಬಾಂದ್ರಾ ಅಪಾರ್ಟ್ ಮೆಂಟ್ ನಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಕಂಡುಬರುವ ಮೊದಲು ಸುಶಾಂತ್ ಅಭಿನಯದ ಕೊನೆಯ ಚಿತ್ರ 'ಚಿಚೋರೆ'.

'ಚಿಚೋರೆ' ಚಿತ್ರವನ್ನು  ನಿತೇಶ್ ತಿವಾರಿ ನಿರ್ದೇಶಿಸಿದ್ದು, ತಿವಾರಿ ಹಾಗೂ ಪಿಯೂಷ್ ಗುಪ್ತಾ ಹಾಗೂ ನಿಖಿಲ್ ಮೆಹ್ರೋತ್ರಾ ಚಿತ್ರಕಥೆ ಬರೆದಿದ್ದರು. ಚಿತ್ರದಲ್ಲಿ ಸುಶಾಂತ್ ಸಿಂಗ್ ರಜಪೂತ್, ಶ್ರದ್ಧಾ ಕಪೂರ್, ವರುಣ್ ಶರ್ಮಾ, ತಾಹಿರ್ ರಾಜ್ ಭಾಸಿನ್, ನವೀನ್ ಪೊಲಿಶೆಟ್ಟಿ, ತುಷಾರ್ ಪಾಂಡೆ ಹಾಗೂ ಸಹರ್ಷ್ ಕುಮಾರ್ ಶುಕ್ಲಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.

ಜೆಇಇ ಪ್ರವೇಶ ಪರೀಕ್ಷೆಯ ಫಲಿತಾಂಶವನ್ನು ಕಾಯುತ್ತಿರುವ ಹದಿಹರೆಯದ ಮಗ ರಾಘವ್ ತಂದೆ ಅನಿರುದ್ಧ್ ಅಥವಾ ಅನ್ನಿ ಪಾತ್ರವನ್ನು ಸುಶಾಂತ್ ನಿರ್ವಹಿಸಿದ್ದಾರೆ

ಸಕಾರಾತ್ಮಕ ವಿಮರ್ಶೆಗಳನ್ನು ಪಡೆದಿದ್ದ 'ಚಿಚೋರ್' ಗಲ್ಲಾಪೆಟ್ಟಿಗೆಯಲ್ಲಿ ದೊಡ್ಡ ಮೊತ್ತವನ್ನು ಗಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News