ಕಾನೂನುಬದ್ಧ ಮದ್ಯ ಸೇವನೆಯ ವಯಸ್ಸನ್ನು ಇಳಿಸಿದ ದಿಲ್ಲಿ ಸರಕಾರ
Update: 2021-03-22 18:12 IST
ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯಲ್ಲಿ ಕಾನೂನುಬದ್ದ ಮದ್ಯ ಸೇವನೆಯ ವಯಸ್ಸನ್ನು 25ರಿಂದ 21ಕ್ಕೆ ಇಳಿಸಲಾಗಿದೆ ಎಂದು ದಿಲ್ಲಿ ಸರಕಾರ ಸೋಮವಾರ ಪ್ರಕಟಿಸಿದೆ.
ಹೊಸ ಅಬಕಾರಿ ನೀತಿಯನ್ನು ದಿಲ್ಲಿ ಸಂಪುಟ ಅಂಗೀಕರಿಸಿದ ಬಳಿಕ ದಿಲ್ಲಿಯಲ್ಲಿ ಮದ್ಯ ಸೇವಿಸುವ ಕನಿಷ್ಠ ವಯಸ್ಸನ್ನು ಕಡಿಮೆ ಮಾಡಲಾಗಿದೆ.
ದಿಲ್ಲಿ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಪತ್ರಿಕಾಗೋಷ್ಠಿ ನಡೆಸಿ ಅಬಕಾರಿ ಪೊಲೀಸರಿಗೆ ಬದಲಾವಣೆಗಳನ್ನು ಪ್ರಕಟಿಸಿದರು.
ದಿಲ್ಲಿ ಸರಕಾರವು ಇನ್ನು ಮುಂದೆ ನಗರದಲ್ಲಿ ಮದ್ಯದಂಗಡಿಗಳನ್ನು ನಡೆಸುವುದಿಲ್ಲ ಹಾಗೂ ರಾಷ್ಟ್ರ ರಾಜಧಾನಿಯಲ್ಲಿ ಯಾವುದೇ ಹೊಸ ಮದ್ಯದಂಗಡಿಗಳನ್ನು ತೆರೆಯಲಾಗುವುದಿಲ್ಲ ಎಂಬ ಮತ್ತೊಂದು ಪ್ರಮುಖ ಘೋಷಣೆಯನ್ನು ಸಿಸೋಡಿಯಾ ಮಾಡಿದರು.
ಮದ್ಯದಂಗಡಿಗಳನ್ನು ನಡೆಸುವುದು ಸರಕಾರದ ಜವಾಬ್ದಾರಿಯಲ್ಲ. ರಾಷ್ಟ್ರ ರಾಜಧಾನಿಯಲ್ಲಿ ಪರವಾನಗಿ ಪಡೆಯದ ಮದ್ಯದಂಗಡಿಗಳನ್ನು ಸಹ ಮುಚ್ಚಲಾಗುವುದು ಎಂದು ಸಿಸೋಡಿಯಾ ಹೇಳಿದ್ದಾರೆ.