ಮೊದಲ ಏಕದಿನ: ಭಾರತ ಶುಭಾರಂಭ

Update: 2021-03-23 16:16 GMT

ಪುಣೆ: ಇಂಗ್ಲೆಂಡ್ ವಿರುದ್ಧದ ಮೊದಲ ಅಂತರ್ ರಾಷ್ಟ್ರೀಯ ಏಕದಿನ ಪಂದ್ಯದಲ್ಲಿ ಆತಿಥೇಯ ಭಾರತವು 66 ರನ್ ಗಳ ಅಂತರದಿಂದ ಜಯ ಸಾಧಿಸಿದೆ. ಇದರೊಂದಿಗೆ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿ ಶುಭಾರಂಭ ಮಾಡಿದೆ.

ಮಂಗಳವಾರ ಟಾಸ್ ಸೋತು ಬ್ಯಾಟಿಂಗ್ ಗೆ ಆಹ್ವಾನಿಸಲ್ಪಟ್ಟ ಭಾರತವು ನಿಗದಿತ 50 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 317 ರನ್ ಗಳಿಸಿತು.

ಗೆಲ್ಲಲು ಕಠಿಣ ಗುರಿ ಬೆನ್ನಟ್ಟಿದ ಇಂಗ್ಲೆಂಡ್ 42.1 ಓವರ್ ಗಳಲ್ಲಿ 251 ರನ್ ಗೆ ಆಲೌಟಾಯಿತು. ಇಂಗ್ಲೆಂಡ್ ಪರ ಆರಂಭಿಕ ಆಟಗಾರ ಜಾನಿ ಬೈರ್ ಸ್ಟೋವ್ (94) ಸರ್ವಾಧಿಕ ಸ್ಕೋರ್ ಗಳಿಸಿದರು. ಜೇಸನ್ ರಾಯ್ ಹಾಗೂ ಬೈರ್ ಸ್ಟೋವ್ ಮೊದಲ ವಿಕೆಟ್ ಗೆ 135 ರನ್ ಗಳಿಸಿ ಭದ್ರ ಬುನಾದಿ ಹಾಕಿಕೊಟ್ಟಿದ್ದರು. ಈ ಜೋಡಿಯನ್ನು ಚೊಚ್ಚಲ ಪಂದ್ಯವನ್ನಾಡಿರುವ ಕನ್ನಡಿಗ ಪ್ರಸಿದ್ದ ಕೃಷ್ಣ ಬೇರ್ಪಡಿಸಿದರು.

ಈ ಇಬ್ಬರು ಬೇರ್ಪಟ್ಟ ಬಳಿಕ ಇಂಗ್ಲೆಂಡ್ ಬ್ಯಾಟಿಂಗ್ ಸೊರಗಿತು. ಮೊಯಿನ್ ಅಲಿ 30 ರನ್ ಗಳಿಸಿದರೂ ತಂಡದ ಗೆಲುವಿಗ ಇದು ಸಾಕಾಗಲಿಲ್ಲ.

ಭಾರತದ ಪರ ಪ್ರಸಿದ್ಧ ಕೃಷ್ಣ(4-54)ಯಶಸ್ವಿ ಬೌಲರ್ ಎನಿಸಿಕೊಂಡರು. ಶಾರ್ದೂಲ್ ಠಾಕೂರ್ (3-37) ಹಾಗೂ ಭುವನೇಶ್ವರ ಕುಮಾರ್ (2-30)ಐದು ವಿಕೆಟ್ ಗಳನ್ನು ಹಂಚಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News