ಗೋವು ಮಿಷನ್‌ಗೆ ಹಣಕಾಸು ಸಚಿವಾಲಯದಿಂದ ಕಡಿಮೆ ನಿಧಿ ಮಂಜೂರು: ಸಂಸದರ ಸಮಿತಿ
ಹೊಸದಿಲ್ಲಿ, ಮಾ. 23: ಹಣಕಾಸು ಸಚಿವಾಲಯ ‘ಅಸೂಕ್ಷ್ಮ’ ಹಾಗೂ ‘ಅಸಹಕಾರಿ’ ಎಂದು ಆರೋಪಿಸಿರುವ ಪಶುಸಂಗೋಪನಾ ಇಲಾಖೆ, ಇದು ದೇಶಿ ಜಾನುವಾರುಗಳ ಉತ್ತೇಜನದ ಗುರಿ ಹೊಂದಿರುವ ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ‘ರಾಷ್ಟ್ರೀಯ ಗೋಕುಲ್ ಮಿಷನ್’ ಮೇಲೆ ದುಷ್ಪರಿಣಾಮ ಉಂಟು ಮಾಡಿದೆ ಎಂದಿದೆ.
ಕಳೆದ ವಾರ ಸಂಸತ್ತಿನ ಮುಂದೆ ತನ್ನ ವರದಿ ಸಲ್ಲಿಸುವ ಸಂದರ್ಭ ಕೃಷಿ ಕುರಿತ ಸ್ಥಾಯಿ ಸಮಿತಿ, ಹಣಕಾಸು ಸಚಿವಾಲಯ ‘ರಾಷ್ಟ್ರೀಯ ಗೋಕುಲ್ ಮಿಷನ್’ಗಾಗಿ 2021-22ಕ್ಕೆ ಪ್ರಸ್ತಾವಿತ 2,243.87 ಕೋಟಿ ರೂಪಾಯಿ ಬದಲಾಗಿ 502.00 ಕೋಟಿ ರೂಪಾಯಿಯನ್ನು ಪಶು ಸಂಗೋಪನ ಇಲಾಖೆಗೆ ಮಂಜೂರು ಮಾಡಿದೆ ಎಂದು ಪ್ರತಿಪಾದಿಸಿದೆ. ದೇಶಿ ಗೋವುಗಳನ್ನು ಉತ್ತೇಜಿಸಲು ಪ್ರಧಾನಿ ನರೇಂದ್ರ ಮೋದಿ ಅವರು 2014ರಲ್ಲಿ ಈ ಮಿಷನ್ ಅನ್ನು ಆರಂಭಿಸಿದ್ದರು. ರೈತರ ಆದಾಯ ಹೆಚ್ಚಿಸಲು ಇದು ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ಹಾಗೂ ಅದರ ಮಾತೃ ಸಂಸ್ಥೆ ಆರ್‌ಎಸ್‌ಎಸ್‌ಗೆ ಪ್ರಮಖ ಯೋಜನೆಯಾಗಿತ್ತು.
2018-19 ರಿಂದ 2019-20ರ ವರೆಗೆ ಶೇ. 1.91ಕ್ಕೆ ಏರಿಕೆಯಾದ ಹಾಗೂ 2020-21ರಲ್ಲಿ ಶೇ. 4.42 ಇರುವ ಕೇಂದ್ರದ ಯೋಜನಾ ವೆಚ್ಚದಲ್ಲಿ ಕೃಷಿ ಹಾಗೂ ಸಹಕಾರಿ ಇಲಾಖೆಯ ಪಾಲಿಗೆ ಹೋಲಿಸಿದರೆ ಪಶು ಸಂಗೋಪನೆ ಹಾಗೂ ಹೈನುಗಾರಿಕೆ ಇಲಾಖೆಯ ಪಾಲು 2018-19ರಿಂದ 2020- 21ರ ವರೆಗೆ ಶೇ. 0.12ರಲ್ಲಿ ಸ್ಥಗಿತಗೊಂಡಿದೆ ಎಂದು ವರದಿ ಉಲ್ಲೇಖಿಸಿದೆ. ಒಟ್ಟು ಹಂಚಿಕೆಯನ್ನು 2019-20ರಲ್ಲಿ ಇದ್ದ 3,180.27ರಿಂದ 2020-21ರಲ್ಲಿ 3,007.89ಕ್ಕೆ ಇಳಿಕೆ ಮಾಡಿ ಪರಿಷ್ಕರಿಸಲಾಗಿದೆ ಎಂದು ಸಮಿತಿ ಅಸಮಾಧಾನ ವ್ಯಕ್ತಪಡಿಸಿದೆ.