"ನಿಮಗೆ ಕಾಲು ತೋರಿಸಬೇಕೆಂದಿದ್ದರೆ ಸೀರೆ ಕಿತ್ತೆಸೆದು ಬರ್ಮುಡಾ ಧರಿಸಿ"
Update: 2021-03-24 20:45 IST
ಕೊಲ್ಕತ್ತಾ: ಮುಂಬರುವ ವಿಧಾನಸಭಾ ಚುನಾವಣೆಯ ನಿಮಿತ್ತ ಪಶ್ಚಿಮ ಬಂಗಾಳದಾದ್ಯಂತ ವ್ಯಾಪಕ ಪ್ರಚಾರ ಕಾರ್ಯಗಳು ನಡೆಯುತ್ತಿವೆ. ಈ ನಡುವೆ ಮಮತಾ ಬ್ಯಾನರ್ಜಿ ಕುರಿತು ಅವಹೇಳನಕಾರಿ ಹೇಳಿಕೆ ನೀಡುವ ಮೂಲ ಬಂಗಾಳದ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ವಿವಾದ ಸೃಷ್ಟಿಸಿದ್ದಾರೆ. "ಮಮತಾ ಬ್ಯಾನರ್ಜಿ ತನ್ನ ಕಾಲುಗಳನ್ನು ತೋರಿಸಲು ಬಯಸಿದರೆ, ಅವರು ಸೀರೆ ಕಿತ್ತೆಸೆದು ಒಂದು ಜೋಡಿ ಬರ್ಮುಡಾಗಳನ್ನು ಧರಿಸಬೇಕು" ಎಂದು ಹೇಳಿಕೆ ನೀಡಿದ್ದಾರೆ.
ಪಶ್ಚಿಮ ಬಂಗಾಳದ ಪುರುಲಿಯಾದಲ್ಲಿ ನಡೆದ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ ದಿಲೀಪ್ ಘೋಷ್, "ಈಗ ಪ್ಲಾಸ್ಟರ್ ಅನ್ನು ತೆಗೆದು ಹಾಕಲಾಗಿದೆ. ಅವರು ಒಂದು ಕಾಲನ್ನು ಸೀರೆಯಿಂದ ಮುಚ್ಚಿದ್ದರೆ, ಇನ್ನೊಂದು ಕಾಲು ತೆರೆದಿರುತ್ತದೆ. ಅಂತಹ ಸೀರೆ ಧರಿಸುವವರನ್ನು ನಾನು ನೋಡಲಿಲ್ಲ" ಎಂದು ಹೇಳಿಕೆ ನೀಡಿದ್ದರು.
ಈ ಕುರಿತಾದಂತೆ ಟಿಎಂಸಿ ನಾಯಕಿ ಮಹುವಾ ಮೊಯಿತ್ರಾ ಹಾಗೂ ಇನ್ನಿತರ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.