ಈಜಿಪ್ಟ್ ನಲ್ಲಿ ರೈಲುಗಳ ಢಿಕ್ಕಿ; 32 ಸಾವು, 66 ಮಂದಿಗೆ ಗಾಯ

Update: 2021-03-26 16:53 GMT
photo: twitter(@Africaglobalnew)

ಕೈರೋ (ಈಜಿಪ್ಟ್), ಮಾ. 26: ದಕ್ಷಿಣ ಈಜಿಪ್ಟ್‌ನಲ್ಲಿ ಶುಕ್ರವಾರ ಎರಡು ರೈಲುಗಳು ಮುಖಾಮುಖಿ ಢಿಕ್ಕಿಯಾಗಿದ್ದು ಕನಿಷ್ಠ 32 ಮಂದಿ ಮೃತಪಟ್ಟಿದ್ದಾರೆ ಹಾಗೂ 66 ಮಂದಿ ಗಾಯಗೊಂಡಿದ್ದಾರೆ ಎಂದು ದೇಶದ ಆರೋಗ್ಯ ಸಚಿವಾಲಯ ತಿಳಿಸಿದೆ.

ರಾಜಧಾನಿ ಕೈರೋದಿಂದ ಸುಮಾರು 460 ಕಿ.ಮೀ. ದೂರದಲ್ಲಿರುವ ತಹ್ತ ಜಿಲ್ಲೆಯಲ್ಲಿ ಅಪಘಾತ ನಡೆದಿದೆ ಎಂದು ಹೇಳಿಕೆಯೊಂದು ತಿಳಿಸಿದೆ.

ಈಜಿಪ್ಟ್‌ನಲ್ಲಿ ಭೀಕರ ರೈಲು ಅಪಘಾತಗಳು ಆಗಾಗ ನಡೆಯುತ್ತಿವೆ. 2002ರಲ್ಲಿ ನಡೆದ ಅಪಘಾತದಲ್ಲಿ 373 ಮಂದಿ ಮೃತಪಟ್ಟಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News