ಇಷ್ಟೊಂದು ಹಣ ಉಳಿಸಿ ಏನು ಮಾಡುತ್ತೀರಿ? ತೈಲ ಬೆಲೆ 18 ಪೈಸೆ ಇಳಿಕೆಗೆ ರಾಹುಲ್ ವ್ಯಂಗ್ಯ
Update: 2021-03-28 17:56 IST
ಹೊಸದಿಲ್ಲಿ: ಕೇಂದ್ರ ಸರಕಾರವು ಇತ್ತೀಚೆಗೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಪ್ರತಿ ಲೀಟರ್ ಗೆ 17/18 ಪೈಸೆ ಕಡಿಮೆ ಮಾಡಿರುವ ಕುರಿತಾಗಿ ಇಂದು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕೇಂದ್ರ ಸರಕಾರವನ್ನು ವ್ಯಂಗ್ಯವಾಡಿದರು.
“ಪಂಚ ರಾಜ್ಯಗಳ ಚುನಾವಣೆಯ ಹಿನ್ನೆಲೆಯಲ್ಲಿ ಕೇಂದ್ರ ಸರಕಾರವು ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಪ್ರತಿ ಲೀಟರ್ ಗೆ 17/18 ಪೈಸೆ ಇಳಿಸಿದೆ. ಇಷ್ಟು ಪ್ರಮಾಣದ ಹಣ ಉಳಿಸಿ ಏನು ಮಾಡುತ್ತೀರಿ? ಎಂದು ರವಿವಾರ ಹಿಂದಿಯಲ್ಲಿ ಟ್ವೀಟಿಸಿರುವ ರಾಹುಲ್ ಕೇಂದ್ರ ಸರಕಾರವನ್ನು ವ್ಯಂಗ್ಯವಾಡಿದರು.
ದೇಶದಲ್ಲಿ ತೈಲ ಬೆಲೆ ಒಂದೇ ಸಮನೆ ಏರುತ್ತಾ ಬಂದು ನೂರರ ಗಡಿಯಲ್ಲಿ ನಿಂತಿದೆ.ಇದರ ವಿರುದ್ದ ದೇಶಾದ್ಯಂತ ಕಾಂಗ್ರೆಸ್ ಪಕ್ಷ ತೀವ್ರ ಪ್ರತಿಭಟನೆಯನ್ನು ನಡೆಸಿತ್ತು.
चुनाव के कारण केंद्र सरकार ने पेट्रोल-डीज़ल 17/18 पैसे प्रति लीटर सस्ता किया है।
— Rahul Gandhi (@RahulGandhi) March 28, 2021
बचत की इस धनराशि से आप क्या-क्या करेंगे? #FuelLootByBJP