ತಮಿಳುನಾಡು: "ಕಮಲ ಅರಳುವುದಿಲ್ಲ" ಎಂದು ಕೂಗಿದ್ದಕ್ಕೆ ಯುವಕನಿಗೆ ಥಳಿಸಿದ ಬಿಜೆಪಿ ಕಾರ್ಯಕರ್ತರು

Update: 2021-03-28 13:09 GMT

"ಎಲ್ಲಾ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳು ನಿಮ್ಮ ಮನೆ ಬಾಗಿಲಿಗೆ ತಲುಪುತ್ತವೆ. ನಿಮಗೆ ಆರು ಸಿಲಿಂಡರ್‌ಗಳು, ವಾಶಿಂಗ್‌ ಮೆಷಿನ್ ಮತ್ತು ಪ್ರತಿ ಕುಟುಂಬಕ್ಕೆ 1,500 ರೂ. ನೀಡಲಾಗುವುದು" ಎಂದು ಅವರು ನಮಿತಾ ಭಾಷಣದ ವೇಳೆ ಪ್ರಸ್ತಾಪಿಸಿದ್ದರು.

ಅವರ ಭಾಷಣಕ್ಕೆ ಪ್ರತಿಕ್ರಿಯಿಸಿದ ಯುವಕ, 'ಸಿಲಿಂಡರ್‌ಗಳನ್ನು ನೀಡಲಾಗುವುದಿಲ್ಲ', 'ಯಾರೂ ಹಣವನ್ನು ನೀಡುವುದಿಲ್ಲ' ಎಂದು ಹೇಳುವ ಮೂಲಕ ನಕಾರಾತ್ಮಕವಾಗಿ ಪ್ರತಿಕ್ರಿಯಿಸುತ್ತಲೇ ಇದ್ದ ಎನ್ನಲಾಗಿದೆ.

ಅಂತಿಮವಾಗಿ, ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂಬರ್ಥದಲ್ಲಿ 'ತಾಮರೈ ಮಲರುಂ (ಕಮಲ ಅರಳುತ್ತದೆ) ಎಂದು ಹೇಳಿದಾಗ, ಆ ವ್ಯಕ್ತಿಯು 'ತಾಮರೈ ಮಲರಾದ್' (ಕಮಲವು ಅರಳುವುದಿಲ್ಲ) ಎಂದು ಜೋರಾಗಿ ಕೂಗಿಕೊಂಡ ವೇಳೆ ಕಾರ್ಯಕರ್ತರು ಮಧ್ಯಪ್ರವೇಶಿಸಿ ಹಲ್ಲೆಗೈದು ಆತನನ್ನು ಹೊರದಬ್ಬಿದ್ದಾರೆ ಎಂದು ವರದಿಗಳು ಉಲ್ಲೇಖಿಸಿವೆ.

ಆದರೆ, ಈ ಕುರಿತಾದಂತೆ ಯಾವುದೇ ಪೊಲೀಸ್ ಪ್ರಕರಣ ದಾಖಲಾಗಿಲ್ಲ ಮತ್ತು ಯುವಕ ಸ್ಥಳದಿಂದ ನಾಪತ್ತೆಯಾಗಿದ್ದಾನೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News