×
Ad

30ರಲ್ಲಿ 26 ಸೀಟ್‌ ಗೆಲ್ಲುತ್ತೇವೆ ಎನ್ನುವ ಅಮಿತ್‌ ಶಾ ಈಗಾಗಲೇ ʼಇವಿಎಂʼ ಪ್ರವೇಶಿಸಿರಬೇಕು: ಮಮತಾ ಬ್ಯಾನರ್ಜಿ

Update: 2021-03-28 19:07 IST

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಈಗಾಗಲೇ ಮೊದಲ ಹಂತದ ಚುನಾವಣೆಯು ನಡೆದಿದ್ದು, ಈ ಕುರಿತಾದಂತೆ ಗೃಹ ಸಚಿವ ಅಮಿತ್‌ ಶಾ ಬಿಜೆಪಿ ಗೆಲುವಿನ ಕುರಿತು ಭರವಸೆ ವ್ಯಕ್ತಪಡಿಸಿದ್ದರು. "ಮೊದಲ ಹಂತದ ಚುನಾವಣೆ ಮುಕ್ತಾಯವಾಗಿದೆ. ಬೂತ್‌ ಮಟ್ಟದ ಕಾರ್ಯಕರ್ತರು ಹಾಗೂ ಪಕ್ಷದ ಮುಖಂಡರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ʼ30ರಲ್ಲಿ 26 ಸೀಟುಗಳನ್ನು ಗೆಲ್ಲುತ್ತೇವೆʼ ಎಂದು ನಾನು ಹೇಳಬಲ್ಲೆ" ಎಂದು ಹೇಳಿಕೆ ನೀಡಿದ್ದರು. ಈ ಕುರಿತಾದಂತೆ ಇದೀಗ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರತಿಕ್ರಿಯೆ ನೀಡಿದ್ದಾರೆ.

ಈ ಕುರಿತು ಸಮಾವೇಶವೊಂದರಲ್ಲಿ ಮಾತನಾಡಿದ ಮಮತಾ ಬ್ಯಾನರ್ಜಿ, "ಮೊದಲ ಹಂತದಲ್ಲಿ ಮತದಾನ ನಡೆದಿದ್ದು, 30 ಸ್ಥಾನಗಳಲ್ಲಿ 26 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಗೃಹ ಸಚಿವರು ಹೇಳುತ್ತಾರೆ. ನೀವು (ಅಮಿತ್ ಶಾ) ಇವಿಎಂ ಪ್ರವೇಶಿಸಿದ್ದೀರಾ? ಎಲ್ಲಾ 30 ಸ್ಥಾನಗಳನ್ನು ಬಿಜೆಪಿ ಗೆಲ್ಲುತ್ತದೆ ಎಂದು ನೀವು ಯಾಕೆ ಹೇಳಲಿಲ್ಲ?. ಮೇ 2 ಕ್ಕೆ ಕಾಯೋಣ. ಟಿಎಂಸಿ ಗೆಲ್ಲುತ್ತದೆ. ಹೊರಗಿನವರು ಬಂಗಾಳವನ್ನು ಆಳಲು ಸಾಧ್ಯವಿಲ್ಲ" ಎಂದು ಗುಡುಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News