×
Ad

ಇಂದು ತಮಿಳುನಾಡಿಗೆ ಪ್ರಧಾನಿ:‌ ಸಾಮಾಜಿಕ ತಾಣದಲ್ಲಿ ಮತ್ತೆ ʼಗೋ ಬ್ಯಾಕ್‌ ಮೋದಿʼ ಟ್ರೆಂಡಿಂಗ್

Update: 2021-03-30 13:48 IST

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ತಮಿಳುನಾಡಿಗೆ ಭೇಟಿ ನೀಡುವ ಸಂದರ್ಭಗಳಲ್ಲೆಲ್ಲಾ ʼಗೋ ಬ್ಯಾಕ್‌ ಮೋದಿʼ ಹ್ಯಾಶ್‌ ಟ್ಯಾಗ್‌ ಟ್ರೆಂಡಿಂಗ್‌ ಆಗಿದ್ದು, ಇದೀಗ ಇಂದು ಸಮಾವೇಶದಲ್ಲಿ ಭಾಗವಹಿಸಲೆಂದು ಪ್ರಧಾನಿ ನರೇಂದ್ರ ಮೋದಿ ತಮಿಳುನಾಡಿಗೆ ಆಗಮಿಸಲಿದ್ದು, ಟ್ವಿಟರ್‌ ನಲ್ಲಿ ಗೋ ಬ್ಯಾಕ್‌ ಮೋದಿ ಹ್ಯಾಶ್‌ ಟ್ಯಾಗ್‌ ಮತ್ತೆ ಟ್ರೆಂಡಿಂಗ್‌ ಆಗಿದೆ.

"ಗೋ ಬ್ಯಾಕ್‌ ಮೋದಿ ಕೇವಲ ತಮಿಳರದ್ದಲ್ಲ, ರೈತರು, ಅಲ್ಪಸಂಖ್ಯಾತರು, ಮಹಿಳೆಯರು, ದಲಿತರು ಮತ್ತು ತುಳಿಥಕ್ಕೊಳಗಾದ ವರ್ಗದವರ ಘೋಷಣೆಯಾಗಿದೆ. ತುಳಿತಕ್ಕೊಳಗಾಗುವುದು ನಮ್ಮ ಅತೀದೊಡ್ಡ ಶತ್ರು ಎಂದು ಪೆರಿಯಾರ್‌ ನಮಗೆ ತಿಳಿಸಿಕೊಟ್ಟಿದ್ದಾರೆ" ಎಂದು ಬಳಕೆದಾರರೋರ್ವರು ಟ್ವೀಟ್‌ ಮಾಡಿದ್ದಾರೆ. "ಗೋ ಬ್ಯಾಕ್ ಮೋದಿ ಟ್ರೆಂಡಿಂಗ್‌ ಆಗುತ್ತಿದೆ. ಹಾಗಾದ್ರೆ ಇಂದು ಮೋದಿ ತಮಿಳುನಾಡಿಗೆ ಆಗಮಿಸುತ್ತಿರಬಹುದು" ಎಂದು ಬಳಕೆದಾರರು ಟ್ವೀಟ್‌ ಮಾಡಿದ್ದಾರೆ.‌

"ನಮಗೆ ತಮಿಳುನಾಡು ಉತ್ತರಪ್ರದೇಶ ಆಗುವುದು ಇಷ್ಟವಿಲ್ಲ" ಎಂಧು ವ್ಯಕ್ತಿಯೋರ್ವರು ಟ್ವೀಟ್‌ ಮಾಡಿದ್ದಾರೆ. ಕೇವಲ ಸಾಮಾಜಿಕ ತಾಣಗಳಲ್ಲಿ ಮಾತ್ರವಲ್ಲದೇ, ಚೆನ್ನೈನಲ್ಲಿ ಜನರು ಬೃಹದಾಕಾರದ ಬಲೂನ್‌ ನಲ್ಲಿ ʼಗೋ ಬ್ಯಾಕ್‌ ಮೋದಿʼ ಎಂದು ಬರೆದು ಆಕಾಶಕ್ಕೆ ಬಿಟ್ಟಿದ್ದಾರೆ. ಈ ಫೋಟೊಗಳು ಕೂಡಾ ಸಾಮಾಜಿಕ ತಾಣದಾದ್ಯಂತ ವೈರಲ್‌ ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News