ವರದಕ್ಷಿಣೆ ಪಡೆದ ಮದುವೆಯನ್ನು ಬಹಿಷ್ಕರಿಸುತ್ತೇವೆ ಎಂದ ಮುಸ್ಲಿಂ ವಿದ್ವಾಂಸರು

Update: 2021-04-01 07:17 GMT

ಮಿರ್ಝಾಪುರ್: ವರದಕ್ಷಿಣೆಯು ವಿವಾಹದ ಭಾಗವಾಗಿದ್ದರೆ ಅಂತಹಾ ವಿವಾಹಗಳನ್ನು ನಾವು ಮಾನ್ಯಗೊಳಿಸುವುದಿಲ್ಲ ಮತ್ತು ಬಹಿಷ್ಕರಿಸುತ್ತೇವೆ ಎಂದು ಮಿರ್ಝಾಪುರದ ಮುಸ್ಲಿಮ್ ವಿದ್ವಾಂಸರು ತೀರ್ಮಾನಿಸಿದ್ದಾರೆ. ಉತ್ತರ ಪ್ರದೇಶದ ಮಿರ್ಝಾಪುರದಲ್ಲಿನ ಇಸ್ಲಾಮಿಕ್ ಸಂಸ್ಥೆ ಮರ್ಕಝ್ ಸುನ್ನಿ ಜಮೀಯ್ಯತುಲ್ ಉಲಮಾ ಎ ಹಿಂದ್ ನ ವಿದ್ವಾಂಸರು ಈ ನಿರ್ಣಯ ಕೈಗೊಂಡಿದ್ದಾರೆ.

"ವರದಕ್ಷಿಣೆ ನೀಡುವುದು ಮತ್ತು ಪಡೆಯುವುದು ಇಸ್ಲಾಂ ಧರ್ಮದ ಭಾಗವಲ್ಲ" ಎಂದ ಸಮಿತಿಯ ಅಧ್ಯಕ್ಷ ಮೌಲಾನಾ ನಜಮ್‌ ಅಲಿ ಖಾನ್‌ "ವರದಕ್ಷಿಣೆಗಾಗಿ ಹೆಚ್ಚುತ್ತಿರುವ ಬೇಡಿಕೆಯ ಕಾರಣದಿಂದಾಗಿ ಮುಸ್ಲಿಂ ಸಮುದಾಯದ ಬಹುಪಾಲು ಹೆಣ್ಣು ಮಕ್ಕಳು ಮದುವೆಯಾಗದೇ ಬಾಕಿಯಾಗಿದ್ದಾರೆ. ಇದು ಮಾತ್ರವಲ್ಲದೇ ದುಂದು ವೆಚ್ಚದ ಭಾಗವಾಗಿರುವ ಮ್ಯೂಸಿಕ್‌ ಡಿಜೆ, ಪಟಾಕಿ ಸಿಡಿಸುವಿಕೆ ಮುಂತಾದವುಗಳನ್ನು ನಾವು ಬೆಂಬಲಿಸುವುದಿಲ್ಲ" ಎಂದು ಅವರು ಹೇಳಿದ್ದಾರೆ.

"ವರದಕ್ಷಿಣೆಗಾಗಿ ಬೇಡಿಕೆಯಿಡುವವರ ವಿರುದ್ಧ ಈಗಾಗಲೇ ಚಳವಳಿ ಪ್ರಾರಂಭವಾಗಿದೆ" ಎಂದು ಸಮಿತಿಯ ಉಸ್ತುವಾರಿ ಮುಫ್ತಿ ಅಬ್ದುಲ್‌ ಖಾಲಿಕ್‌ ಹೇಳಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News