×
Ad

ಟ್ವಿಟರ್‌ ನಲ್ಲಿ #Askyourprimeminister ಟ್ರೆಂಡಿಂಗ್:‌ ಪ್ರಧಾನಿಗೆ ಪ್ರಶ್ನೆಗಳ ಸುರಿಮಳೆ ಸುರಿಸಿದ ನೆಟ್ಟಿಗರು

Update: 2021-04-01 13:12 IST

ಹೊಸದಿಲ್ಲಿ: ಪೆಟ್ರೋಲ್‌, ಡೀಸೆಲ್‌ ಹಾಗೂ ದಿನಬಳಕೆಯ ವಸ್ತುಗಳ ಬೆಲೆ ಗಗನಕ್ಕೇರಿದ ಹಿನ್ನೆಲೆಯಲ್ಲಿ ಟ್ವಿಟರ್‌ ನಾದ್ಯಂತ ಬಳಕೆದಾರರು ಪ್ರಧಾನಿಗೆ ಪ್ರಶ್ನೆಗಳ ಸುರಿಮಳೆ ಸುರಿಸಿದ್ದಾರೆ. ಈ ಹಿನ್ನೆಯಲ್ಲಿ #askyourprimeminister ಟ್ರೆಂಡಿಂಗ್‌ ಆಗಿದೆ. ಇದು ಮಾತ್ರವಲ್ಲದೇ, ಇಂದು ಎಪ್ರಿಲ್‌ ಫೂಲ್‌ ಬದಲು ಟ್ವಿಟರ್‌ ನಲ್ಲಿ ʼನ್ಯಾಶನಲ್‌ ಜುಮ್ಲಾ ಡೇʼ ಎಂದು ಆಚರಿಸಲಾಗುತ್ತಿದೆ.

"ನಿಮ್ಮ ಮನ್‌ ಕಿ ಬಾತ್‌ ಅನ್ನು ನಮಗೆ ಕೇಳಿ ಸಾಕಾಗಿದೆ. ಈಗ ನಿಮ್ಮ ಮನ್‌ ಕಿ ಬಾತ್‌ ಅನ್ನು ನೀವೇ ಒಮ್ಮೆ ಕೇಳಿ ನೋಡಿ" ಎಂದು ಬಳಕೆದಾರರೋರ್ವರು ಟ್ವೀಟಿಸಿದ್ದರೆ, ಇನ್ನೋರ್ವ ಬಳಕೆದಾರರು 2014ರಲ್ಲಿ ಪ್ರಧಾನಿ ನರೇಂದ್ರಮೋದಿ ರೈತರ ಬದುಕನ್ನು ಉತ್ತಮಗೊಳಿಸುತ್ತೇನೆ. ಅವರ ಆದಾಯವನ್ನು ದ್ವಿಗುಣಗೊಳಿಸುತ್ತೇನೆ ಎಂದಿದ್ದರು. ಆದರೆ ಈಗ ರೈತರು ರಸ್ತೆಯಲ್ಲಿದ್ದಾರೆ. ಇದು ಪ್ರಜಾಪ್ರಭುತ್ವ ಸರಕಾರವೇ ಅಥವಾ ಅಂಬಾನಿ, ಅದಾನಿ ಸರಕಾರವೇ? ಎಂದು ಪ್ರಶ್ನಿಸಿದ್ದಾರೆ.

"ಅಚ್ಛೇದಿನ್‌, ಜಿಡಿಪಿ ಏರಿಕೆ, ಎಲ್ಲಾ ರೈತರಿಗೂ ನೀರಾವರಿ ವ್ಯವಸ್ಥೆ, ರೈತರ ಆದಾಯ ದ್ವಿಗುಣ, ಮಹಿಳೆಯರ ರಕ್ಷಣೆ, ಭ್ರಷ್ಟಾಚಾರ ರಹಿತ ಆಡಳಿತ ಮುಂತಾದವುಗಳೆಲ್ಲಾ ಪ್ರಧಾನಿ ಮೋದಿಯ ಜುಮ್ಲಾಗಳಾಗಿವೆ. ಆದ್ದರಿಂದ ಎಪ್ರಿಲ್‌ ೧ನ್ನು ನಾವು ನ್ಯಾಶನಲ್‌ ಜುಮ್ಲಾ ಡೇ ಆಗಿ ಆಚರಿಸೋಣ ಎಂದು ಕಿಸಾನ್‌ ಏಕ್ತಾ ಮೋರ್ಚಾ ಟ್ವೀಟ್‌ ಮಾಡಿದೆ.

"15 ಲಕ್ಷ ರೂ. ಅಕೌಂಟ್‌ ಗೆ ಬಿದ್ದ ಎಲ್ಲರಿಗೂ ನನ್ನ ಶುಭಾಶಯಗಳು. ನಿಮಗೆಲ್ಲಾ ನಾನು ʼನ್ಯಾಶನಲ್‌ ಜುಮ್ಲಾ ಡೇʼಯ ಶುಭಾಶಯಗಳನ್ನು ವ್ಯಕ್ತಪಡಿಸುತ್ತೇನೆ" ಎಂದು ತಮನ್‌ ಪ್ರೀತ್‌ ಕೌರ್‌ ಎಂಬವರು ಟ್ವೀಟ್‌ ಮಾಡಿದ್ದಾರೆ. ಈ ವಿಚಾರಕ್ಕೆ ಸಂಬಂಧಪಟ್ಟಂತೆ ಇನ್ನೂ ಕೆಲವು ಟ್ವೀಟ್‌ ಗಳು ಈ ಕೆಳಗಿನಂತಿವೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News