ಇತರ ರಾಜ್ಯಗಳ ಗೂಂಡಾಗಳು ನಂದಿಗ್ರಾಮದಲ್ಲಿ ಅಶಾಂತಿ ಸೃಷ್ಟಿಸುತ್ತಿದ್ದಾರೆ: ರಾಜ್ಯಪಾಲರಿಗೆ ಮಮತಾ ದೂರು

Update: 2021-04-01 09:56 GMT

ನಂದಿಗ್ರಾಮ: ಬಿಜೆಪಿ-ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರ ಘರ್ಷಣೆಯ ಹಿನ್ನೆಲೆಯಲ್ಲಿ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇಂದು ರಾಜ್ಯಪಾಲ ಜಗದೀಪ್ ಧಂಕರ್ ಅವರಿಗೆ ಕರೆ ಮಾಡಿ ಪರಿಸ್ಥಿತಿ ವಿವರಿಸಿದ್ದಾರೆ.

ಯಾವುದೇ ಕ್ಷಣದಲ್ಲಿ ಏನಾದರೂ ಆಗಬಹುದು. ಹೊರಗಿನಿಂದ ಇಲ್ಲಿಗೆ ಬಂದಿರುವ ಜನರಿಂದ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ರಾಜ್ಯಪಾಲರಿಗೆ ಮಮತಾ ದೂರಿದ್ದಾರೆ.

ನಂದಿಗ್ರಾಮದ ತನ್ನ ಮನೆಯಿಂದ ಚುನಾವಣೆಯ ಮೇಲ್ಚಿಚಾರಣೆ ನಡೆಸುತ್ತಿರುವ ಮುಖ್ಯಮಂತ್ರಿ ಮಮತಾ ಮಧ್ಯಾಹ್ನ 1 ಗಂಟೆ ಸುಮಾರಿಗೆ ಹೊರಗೆ ತೆರಳಿದ್ದು, ಬಿಜೆಪಿ ಕಾರ್ಯಕರ್ತರು ಮತಗಟ್ಡೆ ವಶಪಡಿಸಿಕೊಂಡಿದ್ದು, ಅಕ್ರಮ ಮತದಾನದಲ್ಲಿ ತೊಡಗಿದ್ದಾರೆ ಎಂದು ತೃಣಮೂಲ ಕಾರ್ಯಕರ್ತರು ದೂರಿದ್ದಾರೆ.

ಇತರ ರಾಜ್ಯಗಳ ಗೂಂಡಾಗಳು ಇಲ್ಲಿ ಅಶಾಂತಿಯನ್ನು ಸೃಷ್ಟಿಸುತ್ತಿದ್ದಾರೆ. ನಾನು ಬೆಳಗ್ಗಿನಿಂದ ಮತದಾನಕ್ಕೆ ಸಂಬಂಧಿಸಿ 63 ದೂರುಗಳನ್ನು ಸಲ್ಲಿಸಿದ್ದೇನೆ. ಚುನಾವಣಾ ಆಯೋಗವು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಮಮತಾ ದೂರಿದ್ದಾರೆ.

ಘೋಷಣೆಗಳನ್ನು ಕೂಗುತ್ತಿರುವವರು ಹೊರಗಿನವರು. ಅವರು ಬಿಹಾರ ಹಾಗೂ ಉತ್ತರಪ್ರದೇಶದಿಂದ ಬಂದಿದ್ದಾರೆ. ಅವರಿಗೆ ಕೇಂದ್ರ ಭದ್ರತಾ ಪಡೆಗಳಿಂದ ರಕ್ಷಣೆ ನೀಡಲಾಗುತ್ತಿದೆ. ಈ ಹಿಂದೆ ಚುನಾವಣಾ ಆಯೋಗಕ್ಕೆ  ಈ ಕುರಿತು ದೂರು ನೀಡಿದ್ದೇವೆ. ಎನ್ ಡಿಎ ರಾಜ್ಯಗಳಿಂದ ಭದ್ರತಾ ಪಡೆಗಳನ್ನು ಕಳುಹಿಸದಂತೆ ಕೋರಿದ್ದೆವು ಎಂದು ಬ್ಯಾನರ್ಜಿ ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News