ಛತ್ತೀಸ್‍ಗಢ ಎನ್‍ಕೌಂಟರ್ ನಲ್ಲಿ ಮೃತಪಟ್ಟ ಯೋಧರಿಗೆ ಗೃಹ ಸಚಿವ ಅಮಿತ್ ಶಾ ಗೌರವ ಸಲ್ಲಿಕೆ

Update: 2021-04-05 06:19 GMT

ರಾಯ್ಪುರ: ಛತ್ತೀಸ್ ಗಢದ ಬಿಜಾಪುರ-ಸುಕ್ಮಾ ಗಡಿ ಬಳಿ ನಕ್ಸಲರು ಶನಿವಾರ ನಡೆಸಿದ ಹೊಂಚು ದಾಳಿಗೆ ಹುತಾತ್ಮರಾದ ಯೋಧರಿಗೆ ಗೃಹ ಸಚಿವ ಅಮಿತ್ ಶಾ ಸೋಮವಾರ ಗೌರವ ಸಲ್ಲಿಸಿದರು.

ಛತ್ತೀಸ್‍ಗಢದ ಬಿಜಾಪುರ ಜಿಲ್ಲೆಯ ಅರಣ್ಯದಿಂದ 20 ಭದ್ರತಾ ಸಿಬ್ಬಂದಿಯ ಮೃತದೇಹಗಳನ್ನು ವಶಕ್ಕೆ ಪಡೆಯಲಾಗಿದೆ. ನಾಲ್ಕು ವರ್ಷಗಳ ಬಳಿಕ ಅತ್ಯಂತ ಭೀಕರವಾದ ನಕ್ಸಲ್ ದಾಳಿಯಲ್ಲಿ ಮೃತಪಟ್ಟವರ ಭದ್ರತಾ ಸಿಬ್ಬಂದಿ ಸಂಖ್ಯೆ 22ಕ್ಕೇರಿಕೆಯಾಗಿದೆ.

ಸುಮಾರು 400ರಷ್ಟಿದ ದಂಗೆಕೋರರು ಮೂರು ಕಡೆಯಿಂದ ಯೋಧರನ್ನು ಸುತ್ತುವರೆದು ಅವರ ಮೇಲೆ ಮಿಷಿನ್ ಗನ್ ಹಾಗೂ ಐಇಡಿಗಳಿಂದ ಹಲವು ಗಂಟೆಗಳ ಕಾಲ ದಾಳಿ ನಡೆಸಿದ್ದರು.
ಎನ್ ಕೌಂಟರ್ ನಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆಯ 8 ಯೋಧರು, ಸ್ಥಳೀಯ ಪೊಲೀಸ್ ಪಡೆಯ 14 ಮಂದಿ ಸಾವನ್ನಪ್ಪಿದ್ದಾರೆ. 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News