ಮಹಾರಾಷ್ಟ್ರದಲ್ಲಿ ಕೊರೋನವೈರಸ್ ಹರಡಲು ವಲಸೆ ಕಾರ್ಮಿಕರೇ ಕಾರಣ ಎಂದ ರಾಜ್ ಠಾಕ್ರೆ

Update: 2021-04-06 13:03 GMT

ಮುಂಬೈ: ಮಹಾರಾಷ್ಟ್ರದಲ್ಲಿ ಕೊರೋನವೈರಸ್ ಕ್ಷಿಪ್ರವಾಗಿ ಹರಡಲು ಇತರ ರಾಜ್ಯಗಳ ವಲಸೆ ಕಾರ್ಮಿಕರು ಕಾರಣ ಎಂದು ಎಂಎನ್‌ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಮಂಗಳವಾರ ಆರೋಪಿಸಿದ್ದಾರೆ.

ಕಳೆದ ಕೆಲವು ವಾರಗಳಿಂದ ಮಹಾರಾಷ್ಟ್ರದಲ್ಲಿ ಹೆಚ್ಚಿನ ಸಂಖ್ಯೆಯ ಹೊಸ ಕೊರೋನ ಸೋಂಕುಗಳು ವರದಿಯಾಗುತ್ತಿವೆ.

ವಲಸೆ ಕಾರ್ಮಿಕರು ಬರುವ ರಾಜ್ಯಗಳಲ್ಲಿ ಕೊರೋನ ವೈರಸ್ ಪರೀಕ್ಷಿಸಲು ಸಾಕಷ್ಟು ವ್ಯವಸ್ಥೆಗಳ ಕೊರತೆಯಿದೆ ಎಂದು ಅವರು ಹೇಳಿದರು.

"ಮಹಾರಾಷ್ಟ್ರವು ಭಾರತದ ಅತ್ಯಂತ ಕೈಗಾರಿಕೀಕರಣಗೊಂಡ ರಾಜ್ಯವಾಗಿದ್ದು, ಇತರ ರಾಜ್ಯಗಳಿಂದ ಹೆಚ್ಚಿನ ಸಂಖ್ಯೆಯ ಕಾರ್ಮಿಕರನ್ನು ಆಕರ್ಷಿಸುತ್ತದೆ. ಈ ಕಾರ್ಮಿಕರು ಬರುವ ರಾಜ್ಯಗಳಲ್ಲಿ ಸಾಕಷ್ಟು ಪರೀಕ್ಷಾ ಸೌಲಭ್ಯಗಳಿಲ್ಲ’’ ಎಂದರು.

"ಕಳೆದ ವರ್ಷ ಲಾಕ್ ಡೌನ್ ಸಮಯದಲ್ಲಿ, ತಮ್ಮ ತವರೂರಿಗೆ ಮರಳಿದ್ದ ವಲಸೆ ಕಾರ್ಮಿಕರನ್ನು ಪರೀಕ್ಷಿಸಬೇಕೆಂದು ನಾನು ಒತ್ತಾಯಿಸಿದ್ದೆ, ಆದರೆ ಅದನ್ನು ಮಾಡಲಾಗಿಲ್ಲ" ಎಂದು ರಾಜ್ ಠಾಕ್ರೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರೊಂದಿಗಿನ ವಾಸ್ತವಿಕ ಸಂವಾದದ ನಂತರ ಸುದ್ದಿಗಾರರಿಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News