ಮಾರ್ಗಸೂಚಿಗಳಲ್ಲಿ ಸ್ಪಷ್ಟತೆ ಇರಲಿ

Update: 2021-04-06 17:53 GMT

ಮಾನ್ಯರೇ,
ರಾಜ್ಯ ಸರಕಾರವು ಪದೇ ಪದೇ ಕೋವಿಡ್ ಮಾರ್ಗಸೂಚಿಗಳನ್ನು ಬದಲಿಸುತ್ತಿರುವುದು ವಿಷಾದನೀಯ. ಇತ್ತೀಚೆಗೆ ಸಿನೆಮಾ ಮಂದಿರಗಳಲ್ಲಿ ಶೇ. 50ರಷ್ಟು ಸೀಟುಗಳ ಭರ್ತಿಗೆ ಮಾತ್ರ ಅವಕಾಶ ಕಲ್ಪಿಸಿ ಅವಸರದಲ್ಲಿ ಆದೇಶ ಹೊರಡಿಸಿದ್ದ ಸರಕಾರವು ಮರುದಿನವೇ ಅದನ್ನು ಪರಿಷ್ಕರಿಸಿ ಮತ್ತೆ ಯಥಾಸ್ಥಿತಿಗೆ ಮುಂದುವರಿಸಿದೆ. ಅಲ್ಲದೆ ಜಿಮ್‌ಗಳ ಕಾರ್ಯನಿರ್ವಹಣೆಯನ್ನು ಸಂಪೂರ್ಣವಾಗಿ ನಿರ್ಬಂಧಿಸಿದ್ದ ಸರಕಾರ, ಪರಿಷ್ಕೃತ ಆದೇಶದಲ್ಲಿ ಗರಿಷ್ಠ ಸಾಮರ್ಥ್ಯದ ಶೇ. 50ರಷ್ಟು ಪ್ರವೇಶಕ್ಕೆ ಅನುಮತಿ ನೀಡಿದೆ.

ಸರಕಾರವು ಹೊರಡಿಸುತ್ತಿರುವ ಮಾರ್ಗಸೂಚಿಗಳು ಗೊಂದಲಕಾರಿಯಾಗಿವೆ. ಆದೇಶಗಳಲ್ಲಿ ಯಾವುದಕ್ಕೂ ಸ್ಪಷ್ಟತೆ ಕಾಣುತ್ತಿಲ್ಲ. ಒಂದು ಬಾರಿ ಹೊರಡಿಸಿದ ಮಾರ್ಗಸೂಚಿಗಳನ್ನು ಮತ್ತೆ ಪುನಃ ಬದಲಿಸಿದರೆ ಆ ಮಾರ್ಗಸೂಚಿಗಳಿಗೆ ಬೆಲೆ ಇರುತ್ತದೆಯೇ? ಮಾರ್ಗಸೂಚಿಗಳ ಜಾರಿಗೆ ಸಂಬಂಧಿಸಿದಂತೆ ಸರಕಾರದ ಗೊಂದಲಗಳನ್ನು ಗಮನಿಸಿದರೆ, ಪರಿಣಾಮದ ಬಗ್ಗೆ ಯೋಚಿಸದೆ ನಿರ್ಧಾರ ಕೈಗೊಳ್ಳುತ್ತಿರುವಂತೆ ಕಾಣಿಸುತ್ತದೆ. ತನಗೇ ಗೊಂದಲ ಇರುವ ಮಾರ್ಗಸೂಚಿಯನ್ನು ಜನ ಪಾಲಿಸಬೇಕೆಂದು ಸರಕಾರ ನಿರೀಕ್ಷಿಸುತ್ತಿರುವುದು ಸರಿಯೇ? ಕೋವಿಡ್ ಮಾರ್ಗಸೂಚಿಗಳಿಗೆ ಜನಪ್ರತಿನಿಧಿಗಳು ಮತ್ತು ಸೆಲೆಬ್ರಿಟಿಗಳಿಗೆ ಪ್ರತ್ಯೇಕ ಕಾನೂನುಗಳಿವೆಯೇ? ಇನ್ನಾದರೂ ರಾಜ್ಯ ಸರಕಾರವು ಗೊಂದಲಗಳನ್ನು ಬದಿಗಿಟ್ಟು ಮಾರ್ಗಸೂಚಿಗಳ ಬಗ್ಗೆ ಸ್ಪಷ್ಟತೆ ಕಾಣಿಸಲಿ.

Writer - -ಸಂತೋಷ ಜಾಬೀನ್, ಸುಲೇಪೇಟ್

contributor

Editor - -ಸಂತೋಷ ಜಾಬೀನ್, ಸುಲೇಪೇಟ್

contributor

Similar News