ತಮಿಳುನಾಡು ಚುನಾವಣೆ: ಒಮ್ಮೆ ತೊಳೆದ ನಂತರ ಚುನಾವಣಾ ಶಾಯಿ ಕಣ್ಮರೆ?

Update: 2021-04-07 11:59 GMT

ಚೆನ್ನೈ: ಕೊಯಮತ್ತೂರು ಉತ್ತರ ಮತ್ತು ಚೆನ್ನೈನಲ್ಲಿ ಒಂದು ಬಾರಿ ತೊಳೆದ  ನಂತರ ಅಳಿಸಲಾಗದ ಚುನಾವಣಾ ಶಾಯಿ ಕಣ್ಮರೆಯಾದ ಘಟನೆಗಳು ವರದಿಯಾಗಿವೆ.

ಕೊಯಮತ್ತೂರಿನ (ಉತ್ತರ) ತಮ್ಮ ಕ್ಷೇತ್ರದಲ್ಲಿ ಮತ ಚಲಾಯಿಸಿದವರಲ್ಲಿ ವಿಷ್ಣು ಸ್ವರೂಪ್ ಮೊದಲಿಗರು. ಅವರು ಬೆಳಿಗ್ಗೆ 7.30 ಕ್ಕೆ ಕೋವಿಲ್ಮೆಡು ಕಾರ್ಪೊರೇಷನ್ ಪ್ರೌಢ ಶಾಲೆಯಲ್ಲಿ ಮತ ಚಲಾಯಿಸಿದರು ಹಾಗೂ ಬೆಳಿಗ್ಗೆ 10.30 ರ ಹೊತ್ತಿಗೆ ಮನೆಗೆ ಬಂದ ಬಳಿಕ  ಅವರ ಚುನಾವಣಾ ಶಾಯಿ ಅಳಿಸಿಹೋಗಿರುವುದು ಕಂಡುಬಂದಿದೆ.

“ನಾನು ಫ್ಲೈಯಿಂಗ್ ಸ್ಕ್ವಾಡ್ ಟೋಲ್ ಫ್ರೀ ಸಂಖ್ಯೆಗೆ ಹಾಗೂ ವಿಧಾನಸಭಾ ಕ್ಷೇತ್ರದ ರಿಟರ್ನಿಂಗ್ ಆಫೀಸರ್ ಗೆ  ಕರೆ ಮಾಡಿದ್ದರೂ ಸರಿಯಾದ ಪ್ರತಿಕ್ರಿಯೆ ಸಿಗಲಿಲ್ಲ. ಹಾಗಾಗಿ ನಾನು ಸಂಜೆ 4 ಗಂಟೆಗೆ ಮತಗಟ್ಟೆ ಅಧಿಕಾರಿಗೆ ಈ ವಿಷಯದ ಬಗ್ಗೆ ಹೇಳಿದೆ. ಅವರು ಮತ್ತೆ ನನ್ನ ಬೆರಳಿಗೆ ಶಾಯಿ ಹಾಕಿದರು. ಆದರೆ  ಸಂಜೆ 4.15 ಕ್ಕೆ ಮನೆಗೆ ತೆರಳಿ ಕೈ ತೊಳೆದಾಗ ಶಾಯಿ ಅಳಿಸಿಹೋಗಿದೆ”ಎಂದು ಸ್ವರೂಪ್ ಹೇಳಿದರು. 

ಕೊಯಮತ್ತೂರಿನ ರಿಟರ್ನಿಂಗ್ ಅಧಿಕಾರಿ (ಉತ್ತರ) ಕ್ಷೇತ್ರದಲ್ಲಿ ಇಂತಹ ಯಾವುದೇ ಘಟನೆಯನ್ನು ನಿರಾಕರಿಸಿದ್ದಾರೆ.

ನಾನು ಕೈಗೆ ಸ್ಯಾನಿಟೈಸರ್ ಅನ್ನು ಬಳಸಿದ ನಂತರ ನನಗೆ ಹಾಕಿದ್ದ  ಶಾಯಿ ಮಸುಕಾಗಿ ಕಾರಣಲಾರಂಭಿಸಿದೆ ಎಂದು  ಎಂದು ಚೆನ್ನೈನ ಇನ್ನೋರ್ವ ನಿವಾಸಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News