ರಾಜ್ಯಾದ್ಯಂತ ರಾಜಕೀಯ ಸಮಾವೇಶಗಳಿಗೆ ಸಂಪೂರ್ಣ ನಿರ್ಬಂಧ ಹೇರಿದ ಪಂಜಾಬ್‌ ಸರಕಾರ

Update: 2021-04-07 12:38 GMT

ಚಂಡೀಗಢ: ಪಂಜಾಬ್ ರಾಜ್ಯದಲ್ಲಿ ಏರಿಕೆಯಾಗುತ್ತಿರುವ ಕೋವಿಡ್ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯದ ಅಮರಿಂದರ್ ಸಿಂಗ್ ಸರಕಾರ ರಾತ್ರಿ ಕರ್ಫ್ಯೂವನ್ನು ಸಂಪೂರ್ಣ ರಾಜ್ಯಕ್ಕೆ ವಿಸ್ತರಿಸಿದೆಯಲ್ಲದೆ ಎಪ್ರಿಲ್ 30ರ ತನಕ ರಾಜ್ಯದಲ್ಲಿ ರಾಜಕೀಯ ಸಮಾವೇಶಕ್ಕೆ ಸಂಪೂರ್ಣ ನಿಷೇಧ ಹೇರಿದೆ. ರಾಜಕೀಯ ನೇತಾರರೂ ಸೇರಿದಂತೆ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ವಿಪತ್ತು ನಿರ್ವಹಣಾ ಕಾಯಿದೆ ಹಾಗೂ ಸಾಂಕ್ರಾಮಿಕ ಕಾಯಿದೆಯನ್ವಯ ಪ್ರಕರಣ ದಾಖಲಿಸಲಾಗುವುದು ಎಂದು ಸರಕಾರ ಎಚ್ಚರಿಸಿದೆ.

ಈ ಹಿಂದೆ ರಾಜ್ಯದಲ್ಲಿ ರಾತ್ರಿ ಕರ್ಫ್ಯೂ (ರಾತ್ರಿ 9ರಿಂದ ಬೆಳಿಗ್ಗೆ 5ರ ತನಕ) ಕೇವಲ 12 ಜಿಲ್ಲೆಗಳಲ್ಲಿ ಹೇರಲಾಗಿತ್ತು  ಅದನ್ನೀಗ ಇಡೀ ರಾಜ್ಯಕ್ಕೆ ವಿಸ್ತರಿಸಲಾಗಿದೆ. ಅಂತ್ಯಕ್ರಿಯೆ, ವಿವಾಹ ಸಮಾರಂಭಗಳಿಗೆ ಒಳಾಂಗಣಗಳಲ್ಲಿ 50 ಮಂದಿ ಹಾಗೂ ಹೊರಾಂಗಣಗಳಲ್ಲಿ 100 ಮಂದಿಯ ಮಿತಿ ಹೇರಲಾಗಿದೆ.

ರಾಜಕೀಯ ಸಮಾವೇಶ ಏರ್ಪಡಿಸಿದಲ್ಲಿ ಅದರ ಸಂಘಟಕರು, ಭಾಗವಹಿಸುವ ರಾಜಕೀಯ ನೇತಾರರೂ ಸೇರಿದಂತೆ ಎಲ್ಲರ ವಿರುದ್ಧ ಹಾಗೂ ಸಮಾವೇಶಗಳಿಗೆ ಸಿದ್ಧತೆ ನಡೆಸುವವರ ವಿರುದ್ಧ ಪ್ರಕರಣ ದಾಖಲಿಸುವಂತೆ ರಾಜ್ಯ ಸರಕಾರ ಪೊಲೀಸ್ ಇಲಾಖೆಗೆ ಸೂಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News