ಸಿಸಿಐ ಆದೇಶದ ವಿರುದ್ಧ ಫೇಸ್‌ಬುಕ್, ವಾಟ್ಸ್ಯಾಪ್ ಅರ್ಜಿಗಳ ವಿಚಾರಣೆಯಿಂದ ದೂರಸರಿದ ಹೈಕೋರ್ಟ್ ನ್ಯಾಯಾಧೀಶೆ

Update: 2021-04-08 14:30 GMT

ಹೊಸದಿಲ್ಲಿ,ಎ.8: ಭಾರತೀಯ ಸ್ಪರ್ಧಾ ಆಯೋಗ (ಸಿಸಿಐ)ವು ವಾಟ್ಸ್ಯಾಪ್‌ನ ನೂತನ ಗೌಪ್ಯ ನೀತಿಯ ಕುರಿತು ತನಿಖೆಗೆ ಆದೇಶಿಸಿರುವುದನ್ನು ಪ್ರಶ್ನಿಸಿ ಫೇಸ್‌ಬುಕ್ ಮತ್ತು ವಾಟ್ಸ್ಯಾಪ್ ಪ್ರತ್ಯೇಕವಾಗಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆ ನಡೆಸಲು ದಿಲ್ಲಿ ಉಚ್ಚ ನ್ಯಾಯಾಲಯದ ನ್ಯಾಯಾಧೀಶೆ ನ್ಯಾ.ಪ್ರತಿಭಾ ಎಂ.ಸಿಂಗ್ ಅವರು ಗುರುವಾರ ನಿರಾಕರಿಸಿದ್ದಾರೆ.

ಮುಖ್ಯ ನ್ಯಾಯಾಧೀಶರ ಆದೇಶಕ್ಕೊಳಪಟ್ಟು ಅರ್ಜಿಗಳನ್ನು ಎ.12ರಂದು ಬೇರೆ ಪೀಠದ ಮುಂದಿರಿಸುವಂತೆ ನ್ಯಾ.ಸಿಂಗ್ ಅವರು ಉಚ್ಚ ನ್ಯಾಯಾಲಯದ ರಿಜಿಸ್ಟ್ರಿಗೆ ನಿರ್ದೇಶ ನೀಡಿದರು.

ಮಾ.24ರಂದು ವಾಟ್ಸ್ಯಾಪ್‌ನ ನೂತನ ಗೌಪ್ಯ ನೀತಿಯ ಕುರಿತು ತನಿಖೆಗೆ ಆದೇಶಿಸಿದ್ದ ಸಿಸಿಐ,60 ದಿನಗಳೊಳಗೆ ತನಿಖೆಯನ್ನು ಪೂರ್ಣಗೊಳಿಸುವಂತೆ ಸೂಚಿಸಿತ್ತು.

ಗೌಪ್ಯ ನೀತಿಯು ಸರ್ವೋಚ್ಚ ನ್ಯಾಯಾಲಯದ ಮುಂದಿರುವುದರಿಂದ ಸಿಸಿಐ ತನಿಖೆಗೆ ಆದೇಶಿಸುವ ಅಗತ್ಯವಿರಲಿಲ್ಲ ಎಂದು ಫೇಸ್‌ಬುಕ್ ಮತ್ತು ವಾಟ್ಸಾಪ್ ನ್ಯಾಯವಾದಿ ತೇಜಸ್ ಕರಿಯಾ ಅವರ ಮೂಲಕ ಸಲ್ಲಿಸಿರುವ ಅರ್ಜಿಗಳಲ್ಲಿ ವಾದಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News