‘ಮಾಸ್ಟರ್’ ಧೋನಿ -‘ಅಂಪ್ರೆಟಿಸ್’ ಪಂತ್ ನಡುವೆ ಹಣಾಹಣಿ

Update: 2021-04-10 04:35 GMT

ಮುಂಬೈ, ಎ.10: ರಿಷಭ್ ಪಂತ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವೆ ಶನಿವಾರ ಇಲ್ಲಿ ನಡೆಯುವ ಐಪಿಎಲ್ ಪಂದ್ಯವು ‘ಯುವ ಅಪ್ರೆಂಟಿಸ್’ ಮತ್ತು ಅವರ ‘ಮಾಸ್ಟರ್’ ನಡುವಿನ ಹಣಾಹಣಿಯಾಗಲಿದೆ. ಎರಡೂ ತಂಡಗಳು ತಮ್ಮ ಅಭಿಯಾನಕ್ಕೆ ಗೆಲುವಿನ ಆರಂಭದ ಗುರಿ ಹೊಂದಿವೆ.

 ಡೆಲ್ಲಿ ತಂಡವು ಯುಎಇಯಲ್ಲಿ ಕಳೆದ ಋತುವಿನಲ್ಲಿ ಎರಡನೇ ಸ್ಥಾನದೊಂದಿಗೆ ಕೊನೆಗೊಳಿಸಿತ್ತು. ಈ ಬಾರಿ ಉತ್ತಮವಾಗಿ ಮುನ್ನಡೆಯುವ ಗುರಿಯನ್ನು ಹೊಂದಿದೆ. ಇದೀಗ ಉತ್ತಮ ಆರಂಭಕ್ಕೆ ನೋಡುತ್ತಿದೆ.

 ಮೂರು ಬಾರಿ ಚಾಂಪಿಯನ್ ಆಗಿದ್ದ ಸಿಎಸ್‌ಕೆ ತಂಡಕ್ಕೆ 2020ನೇ ಆವೃತ್ತಿ ಮರೆಯಲಾಗದ ಸೋಲಿನ ಸರಮಾಲೆಯನ್ನು ಅನುಭವಿಸಿತ್ತು. ಎಂಟು ತಂಡಗಳ ಪೈಕಿ ಏಳನೇ ಸ್ಥಾನ ಪಡೆದಿತ್ತು. ಈ ಕಾರಣದಿಂದಾಗಿ 2021ರಲ್ಲಿ ಗೆಲುವಿನ ಶುಭಾರಂಭವನ್ನು ನೋಡುತ್ತಿದೆ. ‘‘ನಾಯಕನಾಗಿ ನನ್ನ ಮೊದಲ ಪಂದ್ಯವು ಮಹಿ ಭಾಯ್ (ಎಂ.ಎಸ್. ಧೋನಿ) ವಿರುದ್ಧ ನಡೆಯಲಿದೆ. ನಾನು ಅವರಿಂದ ಸಾಕಷ್ಟು ಕಲಿತಿದ್ದರಿಂದ ಇದು ನನಗೆ ಉತ್ತಮ ಅನುಭವವಾಗಿರುತ್ತದೆ. ನನ್ನ ಸ್ವಂತ ಅನುಭವವನ್ನು ಮತ್ತು ಅವರಿಂದ ಕಲಿತಿರುವುದನ್ನು ನಾನು ಮೊದಲ ಪಂದ್ಯದಲ್ಲಿ ಜಾರಿಗೊಳಿಸುತ್ತೇನೆ’’ ಎಂದು ಪಂತ್ ಹೇಳಿದ್ದಾರೆ.ಡೆಲ್ಲಿ ತಂಡ ಪ್ರಬಲ ಬ್ಯಾಟಿಂಗ್ ವಿಭಾಗವನ್ನು ಹೊಂದಿದೆ. ಶಿಖರ್ ಧವನ್, ಪೃಥ್ವಿ ಶಾ, ಅಜಿಂಕ್ಯ ರಹಾನೆ, ಸ್ಟೀವನ್ ಸ್ಮಿತ್ ಮತ್ತು ಪಂತ್ ತಂಡದಲ್ಲಿದ್ದಾರೆ.

 ಧವನ್ (618 ರನ್) ಐಪಿಎಲ್ 2020ರಲ್ಲಿ ಎರಡನೇ ಅತಿ ಹೆಚ್ಚು ರನ್ ಗಳಿಸಿದವರಾಗಿದ್ದು, ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಉತ್ತಮ ಫಾರ್ಮ್‌ನಲ್ಲಿದ್ದರು. ವಿಜಯ್ ಹಝಾರೆ ಟ್ರೋಫಿಯಲ್ಲಿ 827 ರನ್ ಗಳಿಸಿದ ನಂತರ ಶಾ ತನ್ನ ಮೌಲ್ಯವನ್ನು ಸಾಬೀತುಪಡಿಸಲು ನೋಡುತ್ತಿದ್ದಾರೆ. ಶಾ ಮತ್ತು ಧವನ್ ಇ

 ನಿಂಗ್ಸ್ ಆರಂಭಿಸುವ ಸಾಧ್ಯತೆ ಇದೆ. ಡೆಲ್ಲಿ ತಂಡವು ಆಲ್‌ರೌಂಡರ್ ಮಾರ್ಕಸ್ ಸ್ಟೋನಿಸ್, ಶಿಮ್ರಾನ್ ಹೆಟ್ಮಿಯರ್ ಮತ್ತು ಸ್ಯಾಮ್ ಬಿಲ್ಲಿಂಗ್ಸ್‌ರಂತಹ ಆಟಗಾರರನ್ನು ಸಹ ಹೊಂದಿದೆ.ಆದರೆ ಅವರ ತಂಡದ ಸಂಯೋಜನೆಯನ್ನು ಸರಿಯಾಗಿ ಪಡೆಯಬೇಕಾಗುತ್ತದೆ, ಏಕೆಂದರೆ ಕೇವಲ ನಾಲ್ಕು ವಿದೇಶಿ ಆಟಗಾರರು ಮಾತ್ರ ಆಡುವ ಇಲೆವೆನ್‌ನಲ್ಲಿ ಕಾಣಿಸಿಕೊಳ್ಳಲು ಅವಕಾಶ ಇದೆ.

ಇಶಾಂತ್ ಶರ್ಮಾ, ಕಾಗಿಸೊ ರಬಾಡಾ, ಉಮೇಶ್ ಯಾದವ್, ಕ್ರಿಸ್ ವೋಕ್ಸ್ ಮತ್ತು ಅನ್ರಿಚ್ ನಾರ್ಟ್ಜ್ ಅವರನ್ನೊಳಗೊಂಡ ವೇಗಿಗಳ ಬ್ಯಾಟರಿಯಿಂದ ಆಯ್ಕೆ ಮಾಡಲು ಅವರಿಗೆ ಸಾಕಷ್ಟು ಆಯ್ಕೆಗಳಿವೆ.

<ಡೆಲ್ಲಿ ಕ್ಯಾಪಿಟಲ್ಸ್ : ರಿಷಭ್ ಪಂತ್ (ನಾಯಕ/ವಿಕೆಟ್ ಕೀಪರ್), ಶಿಖರ್ ಧವನ್, ಪೃಥ್ವಿ ಶಾ, ಅಜಿಂಕ್ಯ ರಹಾನೆ, ಶಿಮ್ರಾನ್ ಹೆಟ್ಮಿಯರ್, ಮಾರ್ಕಸ್ ಸ್ಟೊಯಿನಿಸ್, ಕ್ರಿಸ್ ವೋಕ್ಸ್, ಆರ್ ಅಶ್ವಿನ್, ಅಮಿತ್ ಮಿಶ್ರಾ, ಲಲಿತ್ ಯಾದವ್, ಪ್ರವೀಣ್ ದುಬೆ, ಕಾಗಿಸೊ ರಬಾಡಾ, ಅನ್ರಿಚ್ ನಾರ್ಟ್ಜ್, ಅವೇಶ್ ಖಾನ್, ಸ್ಟೀವ್ ಸ್ಮಿತ್, ಉಮೇಶ್ ಯಾದವ್, ರಿಪಾಲ್ ಪಟೇಲ್, ವಿಷ್ಣು ವಿನೋದ್, ಲುಕ್ಮನ್ ಮೇರಿವಾಲಾ, ಎಂ.ಸಿದ್ದಾರ್ಥ್, ಟಾಮ್ ಕರ್ರನ್, ಸ್ಯಾಮ್ ಬಿಲ್ಲಿಂಗ್ಸ್.

< ಚೆನ್ನೈ ಸೂಪರ್ ಕಿಂಗ್ಸ್: ಮಹೇಂದ್ರ ಸಿಂಗ್ ಧೋನಿ (ನಾಯಕ/ವಿಕೆಟ್ ಕೀಪರ್ ), ಸುರೇಶ್ ರೈನಾ, ಅಂಬಾಟಿ ರಾಯುಡು, ಕೆ.ಎಂ. ಆಸಿಫ್, ದೀಪಕ್ ಚಹಾರ್, ಡ್ವೇನ್ ಬ್ರಾವೋ, ಫಾಫ್ ಡು ಪ್ಲೆಸಿಸ್, ಇಮ್ರಾನ್ ತಾಹಿರ್, ಎನ್ ಜಗದೀಶನ್, ಕರುಣ್ ಶರ್ಮಾ, ಲುಂಗಿ ಗಿಡಿ, ಮಿಚೆಲ್ ಸಾಂಟ್ನರ್, ರವೀಂದ್ರ ಜಡೇಜ, ಋತುರಾಜ್ ಗಾಯಕ್ವಾಡ್, ಶಾರ್ದುಲ್ ಠಾಕೂರ್, ಸ್ಯಾಮ್ ಕರ್ರನ್, ಆರ್.ಸಾಯಿ ಕಿಶೋರ್, ಮೊಯಿನ್ ಅಲಿ, ಕೆ.ಗೌತಮ್, ಚೇತೇಶ್ವರ ಪೂಜಾರ, ಹರಿಶಂಕರ್ ರೆಡ್ಡಿ, ಭಗತ್ ವರ್ಮಾ, ಸಿ. ಹರಿ ನಿಶಾಂತ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News