×
Ad

ತಮಿಳುನಾಡು ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಾಧವ ರಾವ್ ಕೋವಿಡ್-19ಗೆ ಬಲಿ

Update: 2021-04-11 10:32 IST
photo: twitter

ಚೆನ್ನೈ: ಎಪ್ರಿಲ್ 6ರಂದು ನಡೆದಿದ್ದ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಶ್ರೀವಿಲ್ಲಿಪುಥುರ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಮಾಧವ್ ರಾವ್ ಅವರು ಕೋವಿಡ್-19ನಿಂದಾಗಿ ಮೃತಪಟ್ಟಿದ್ದಾರೆ.

ಕಳೆದ ತಿಂಗಳು ಕೋವಿಡ್-19 ಸೋಂಕಿಗೆ ಒಳಗಾಗಿದ್ದ ರಾವ್ ಅವರು ರವಿವಾರ ಕೋವಿಡ್ ಸಂಬಂಧಿತ ಸಮಸ್ಯೆಗಳಿಂದ ಆಸ್ಪತ್ರೆಯಲ್ಲಿ ನಿಧನರಾದರು.

ಚುನಾವಣೆಯ ಬಳಿಕ ಮೃತಪಟ್ಟಿರುವುದರಿಂದ ಮರು ಚುನಾವಣೆ ನಡೆಯುವುದಿಲ್ಲ. ಒಂದು ವೇಳೆ ರಾವ್ ಅವರು ವಿರುಧುನಗರ್ ಜಿಲ್ಲೆಯ ವಿಧಾನಸಭಾ ಕ್ಷೇತ್ರದಿಂದ ಜಯ ಸಾಧಿಸಿದರೆ ಮರು ಚುನಾವಣೆ ನಡೆಯಲಿದೆ.

ತಮಿಳುನಾಡು ನಾಯಕ ಹಾಗೂ ಶ್ರಿವಿಲ್ಲಿಪುಥುರ್ ಅಸೆಂಬ್ಲಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಾಧವ್ ರಾವ್ ಅವರು ಕೋವಿಡ್ -19 ಸಮಸ್ಯೆಯಿಂದಾಗಿ ಮೃತಪಟ್ಟಿರುವುದನ್ನು ತಿಳಿದು ತುಂಬಾ ನೋವಾಗಿದೆ. ಅವರ ಕುಟುಂಬಕ್ಕೆ ಸಂತಾಪ ಸೂಚಿಸುವೆವು. ಅವರ ಆತ್ಮಕ್ಕೆ ಶಾಂತಿ ಕೋರುತ್ತೇವೆ ಎಂದು ತಮಿಳುನಾಡು ಹಾಗೂ ಪುದುಚೇರಿಯ ಕಾಂಗ್ರೆಸ್ ಕಾರ್ಯದರ್ಶಿ ಸಂಜಯ್ ದತ್ ಟ್ವೀಟಿಸಿದ್ದಾರೆ.

ಎಪ್ರಿಲ್ 6ರಂದು ತಮಿಳುನಾಡಿನ 38 ಜಿಲ್ಲೆಗಳಲ್ಲಿರುವ 234 ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು, ಮತ ಎಣಿಕೆಯು ಮೇ 2ರಂದು ನಡೆಯಲಿದೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News