ಡ್ರಗ್ಸ್ ಕಳ್ಳಸಾಗಾಟಗಾರರ ಗುಂಡಿನ ದಾಳಿಗೆ ಇಬ್ಬರು ಪೊಲೀಸರು ಬಲಿ
ಜೈಪುರ: ರಾಜಸ್ಥಾನದ ಭಿಲ್ವಾರ ಜಿಲ್ಲೆಯಲ್ಲಿ ಗಸ್ತು ತಂಡದ ಮೇಲೆ ಗುಂಡಿನ ದಾಳಿ ನಡೆಸಿದ ಶಂಕಿತ ಡ್ರಗ್ಸ್ ಕಳ್ಳಸಾಗಾಟಗಾರರು ಇಬ್ಬರು ಪೊಲೀಸ್ ಕಾನ್‍ಸ್ಟೇಬಲ್ ಗಳನ್ನು ಕೊಂದಿದ್ದಾರೆ ಎಂದು ಪೊಲೀಸರು ರವಿವಾರ ತಿಳಿಸಿದ್ದಾರೆ.
ಕೊಡ್ಡಿ ಪೊಲೀಸ್ ಠಾಣೆ ಹಾಗೂ ರಾಯ್ಕಾ ಪೊಲೀಸ್ ಠಾಣೆಯ ಪ್ರದೇಶಗಳಲ್ಲಿ ಶನಿವಾರ ರಾತ್ರಿ ಪೊಲೀಸ್ ತಂಡಗಳು ಬ್ಯಾರಿಕೇಡ್ ಹಾಕಿ ಗಸ್ತು ತಿರುಗುತ್ತಿದ್ದಾರೆ ಈ ಘಟನೆ ನಡೆದಿದೆ.
ಎರಡು ವಾಹನಗಳಲ್ಲಿ ಪ್ರಯಾಣಿಸುತ್ತಿದ್ದ ಶಸ್ತ್ರಸಜ್ಜಿತ ಕಳ್ಳ ಸಾಗಾಣಿಕೆದಾರರು ಪೊಲೀಸ್ ತಂಡಗಳ ಮೇಲೆ ಗುಂಡು ಹಾರಿಸಿದ್ದು, ಇದರಲ್ಲಿ ಇಬ್ಬರು ಕಾನ್ ಸ್ಟೇಬಲ್ ಗಳಿಗೆ ಬುಲೆಟ್ ನಿಂದ ಗಾಯವಾಗಿದ್ದು, ಅವರು ಆಸ್ಪತ್ರೆಯಲ್ಲಿ ಮೃತಪಟ್ಟರು.
ಗುಂಡಿನ ದಾಳಿಯಲ್ಲಿ ಇಬ್ಬರು ಕಾನ್ ಸ್ಟೇಬಲ್ ಗಳು ಸಾವನ್ನಪ್ಪಿದ್ದಾರೆ. ಆರೋಪಿಗಳನ್ನು ಹುಡುಕಲು ಪೊಲೀಸ್ ತಂಡಗಳನ್ನು ರಚಿಸಲಾಗಿದೆ ಎಂದು ಭಿಲ್ವಾರ ಎಸ್ ಪಿ ವಿಕಾಶ್ ಶರ್ಮಾ ಹೇಳಿದ್ದಾರೆ.
ಮೃತಪಟ್ಟ ಪೊಲೀಸರನ್ನು ಓಂಕಾರ್ ರೈಕಾ ಹಾಗೂ ಪವನ್ ಚೌಧರಿ ಎಂದು ಗುರುತಿಸಲಾಗಿದೆ.