×
Ad

ರಮಝಾನ್‌, ನವರಾತ್ರಿ ಹಿನ್ನೆಲೆ: ಧಾರ್ಮಿಕ ಕ್ಷೇತ್ರಗಳಲ್ಲಿ ಗುಂಪುಗೂಡುವುದನ್ನು ನಿಷೇಧಿಸಿದ ಉತ್ತರಪ್ರದೇಶ ಸರಕಾರ

Update: 2021-04-11 13:05 IST

ಲಕ್ನೋ: ಮುಂಬರುವ ರಮಝಾನ್‌ ಮತ್ತು ನವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಆದಿತ್ಯನಾಥ್‌ ಸರಕಾರವು ಧಾರ್ಮಿಕ ಸ್ಥಳಗಳಲ್ಲಿ ಜನರು ಗುಂಪುಗೂಡುವುದನ್ನು ನಿಷೇಧಿಸಿ ಆದೇಶ ಹೊರಡಿಸಿದೆ ಎಂದು ತಿಳಿದು ಬಂದಿದೆ. ಕೋವಿಡ್‌ ನಿಯಂತ್ರಣಕ್ಕಾಗಿ 5 ಮತ್ತು ಹೆಚ್ಚು ಮಂದಿಯನ್ನು ಧಾರ್ಮಿಕ ಸ್ಥಳಗಳಲ್ಲಿ ಗುಂಪುಗೂಡದಂತೆ ಆದೇಶ ಹೊರಡಿಸಲಾಗಿದೆ.

ಶನಿವಾರ ರಾತ್ರಿ ಮುಖ್ಯಮಂತ್ರಿ ಆದಿತ್ಯನಾಥ್‌ ನೇತೃತ್ವದಲ್ಲಿ ಕೋವಿಡ್‌ ನಿಯಂತ್ರಣದ ಕುರಿತಾದಂತೆ ನಡೆದ ಪರಿಶೀಲನಾ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. 

ನವರಾತ್ರಿಯು ಹಿಂದೂ ಧರ್ಮೀಯರು ಆಚರಿಸುವ 9 ದಿನಗಳ ಪ್ರಮುಖ ಉತ್ಸವವಾಗಿದ್ದು, ರಮಝಾನ್‌ ತಿಂಗಳಲ್ಲಿ ಮುಸ್ಲಿಮರು ಉಪವಾಸ ಕೈಗೊಳ್ಳುತ್ತಾರೆ ಮತ್ತು ಆರಾಧನೆಯಲ್ಲಿ ನಿರತರಾಗಿರುತ್ತಾರೆ. ಈ ಕೋವಿಡ್‌ ಎರಡನೇ ಅಲೆಯ ಭೀತಿಯ ನಡುವೆ ರಾಜಕಾರಣಿಗಳು ಮಾತ್ರ ತಮ್ಮ ಚುನಾವಣಾ ಪ್ರಚಾರ ಕಾರ್ಯಗಳಲ್ಲಿ ನಿರತಾಗಿರುವ ಕುರಿತು ಸಾಮಾಜಿಕ ತಾಣದಾದ್ಯಂತ ಚರ್ಚೆ ನಡೆಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News