ಕೊಚ್ಚಿಯಲ್ಲಿ ತುರ್ತು ಲ್ಯಾಂಡಿಂಗ್ ಆದ ಏರ್ ಇಂಡಿಯಾ ಎಕ್ಸ್ ಪ್ರಸ್ ವಿಮಾನ

Update: 2021-04-11 09:17 GMT

ಕೊಚ್ಚಿ: ರಿಯಾದ್-ಕರಿಪುರ ಏರ್ ಇಂಡಿಯಾ ಎಕ್ಸ್ ಪ್ರಸ್ ವಿಮಾನವು 160 ಪ್ರಯಾಣಿಕರೊಂದಿಗೆ ರವಿವಾರ ಮುಂಜಾನೆ 3:10ರ ಸುಮಾರಿಗೆ ಕೊಚ್ಚಿ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್ ಆಗಿದೆ.

ವಿಮಾನವು ಕೆಲವು ತಾಂತ್ರಿಕ ಸಮಸ್ಯೆಯನ್ನು ಎದುರಿಸಿದೆ. ಹೀಗಾಗಿ ಕೊಚ್ಚಿ ಅಂತರ್ ರಾಷ್ಟ್ರೀಯ ಏರ್ ಪೋರ್ಟ್‍ನಲ್ಲಿ ತುರ್ತು ಲ್ಯಾಂಡಿಂಗ್ ಆಗಿದೆ. ಎಲ್ಲಾ ಪ್ರಯಾಣಿಕರನ್ನು ಮತ್ತೊಂದು ವಿಮಾನದಲ್ಲಿ ಕರಿಪುರ ವಿಮಾನ ನಿಲ್ದಾಣಕ್ಕೆ ಕಳುಹಿಸಿಕೊಡಲಾಗಿದೆ. ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ಕೊಚ್ಚಿ ಏರ್ ಪೋರ್ಟ್ ತಿಳಿಸಿದೆ.

ಕಳೆದ ಮೂರು ದಿನಗಳಲ್ಲಿ ಎರಡನೇ ಬಾರಿ ಏರ್ ಇಂಡಿಯಾ ವಿಮಾನವು ತುರ್ತು ಲ್ಯಾಂಡಿಂಗ್ ಆಗಿದೆ.

ಶುಕ್ರವಾರ ಕುವೈಟ್ ಗೆ ತೆರಳುತ್ತಿದ್ದ ಏರ್ ಇಂಡಿಯಾ ಎಕ್ಸ್‍ಪ್ರೆಸ್ ಕರಿಪುರ್ ಏರ್ ಪೋರ್ಟ್ ವಿಮಾನ ನಿಲ್ದಾಣದಿಂದ ಹೊರಟ ತಕ್ಷಣ ಸರಕು ವಿಭಾಗವು ಬೆಂಕಿಯ ಎಚ್ಚರಿಕೆ ನೀಡಿದ ಕಾರಣ ತುರ್ತು ಲ್ಯಾಂಡಿಂಗ್ ಆಗಿತ್ತು. ಆಗ ವಿಮಾನದಲ್ಲಿ 17 ಪ್ರಯಾಣಿಕರು ಹಾಗೂ ಸಿಬ್ಬಂದಿ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News