×
Ad

ರಾಜಸ್ಥಾನದಲ್ಲಿ ಕೋಮು ಹಿಂಸೆ, ಕರ್ಫ್ಯೂ ಹೇರಿಕೆ, ಇಂಟರ್ನೆಟ್ ಸ್ಥಗಿತ

Update: 2021-04-12 11:07 IST
ಸಾಂದರ್ಭಿಕ ಚಿತ್ರ 

ಜೈಪುರ: ರಾಜಸ್ಥಾನದ ಬರಾನ್ ಜಿಲ್ಲೆಯ ಛಬ್ರಾ ಪಟ್ಟಣದಲ್ಲಿ ರವಿವಾರ ಇಬ್ಬರು ಯುವಕರಿಗೆ ಇರಿದ ಹಿನ್ನೆಲೆಯಲ್ಲಿ ಕೋಮು ಹಿಂಸಾಚಾರ ಭುಗಿಲೆದ್ದಿದ್ದು, ಜನರ ಗುಂಪು ಹಲವಾರು ವಾಹನಗಳು ಹಾಗೂ ಅಂಗಡಿಗಳಿಗೆ ಬೆಂಕಿ ಹಚ್ಚಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ಅಧಿಕಾರಿಗಳು  ಇಂಟರ್ ನೆಟ್ ಸ್ಥಗಿತಗೊಳಿಸಿ ಕರ್ಫ್ಯೂವನ್ನು ವಿಧಿಸಿದ್ದಾರೆ. 

ಹಿಂಸೆಯಲ್ಲಿ ತೊಡಗಿದ್ದ ಜನರ ಗುಂಪನ್ನು ಚದುರಿಸಲು ಪೊಲೀಸರು ಅಶ್ರುವಾಯು ಬಳಸಿದರು. ಆದರೆ, ದೊಣ್ಣೆ, ಕಬ್ಬಿಣದ ಸರಳುಗಳು ಹಾಗೂ ಅಸ್ತ್ರಗಳಿಂದ ಶಸ್ತ್ರಸಜ್ಜಿತವಾಗಿದ್ದ ಗುಂಪುಗಳು ರಾತ್ರಿಯ ತನಕ ಹಿಂಸಾಚಾರವನ್ನು ಮುಂದುವರಿಸಿದರು. ಪೊಲೀಸ್ ಹಾಗೂ ಸರಕಾರಿ ವಾಹನಗಳು ಸೇರಿದಂತೆ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡಿದರು ಎಂದು ವರದಿಯಾಗಿದೆ.

ಮಾರುಕಟ್ಟೆಯಲ್ಲಿ ಮೆರವಣಿಗೆ ನಡೆಸಿದ ಒಂದು ಗುಂಪು ಅಲಿಗಂಜ್ ಹಾಗೂ ಅಜಾಜ್ ನಗರದ ಅಂಗಡಿಗಳನ್ನು ಮುಚ್ಚಲು ವ್ಯಾಪಾರಿಗಳಿಗೆ ಒತ್ತಾಯಿಸಿದ ಬಳಿಕ ಹಿಂಸಾಚಾರ ಭುಗಿಲೆದ್ದಿತು. ಇದು ಇತರ ಪ್ರದೇಶಗಳಿಗೂ ಹರಡಿತು ಎಂದು ಮೂಲಗಳು ತಿಳಿಸಿವೆ. 

ಬರಾನ್ ಜಿಲ್ಲಾಧಿಕಾರಿ ರವಿವಾರ ಸಂಜೆ 4ರಿಂದ ಛಬ್ರಾ ಪಟ್ಟಣದ ಪುರಸಭೆಯ ವ್ಯಾಪ್ತಿಯಲ್ಲಿ ಕರ್ಫ್ಯೂ ಆದೇಶಿಸಿದರು. ಎಪ್ರಿಲ್ 13ರಂದು ಸಂಜೆ 4 ಗಂಟೆಯ ತನಕ ಜಿಲ್ಲೆಯಲ್ಲಿ ಇಂಟರ್ನೆಟ್ ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News