×
Ad

ಷೇರು ಹೂಡಿಕೆದಾರರಿಗೆ 15 ನಿಮಿಷಗಳಲ್ಲಿ 7 ಲಕ್ಷ ಕೋಟಿ ರೂ. ನಷ್ಟ!

Update: 2021-04-12 12:55 IST

ಹೊಸದಿಲ್ಲಿ: ಮಹಾರಾಷ್ಟ್ರ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಕೋವಿಡ್-19 ಪ್ರಕರಣಗಳಲ್ಲಿ ದಾಖಲೆಯ ಏರಿಕೆಯಿಂದಾಗಿ ಸೋಮವಾರ ದೇಶೀಯ ಷೇರುಗಳಲ್ಲಿ ತೀವ್ರ ಕುಸಿತವಾಗಿದ್ದು, ಹೂಡಿಕೆದಾರರು 7 ಲಕ್ಷ ಕೋಟಿ ರೂ. ನಷ್ಟ ಅನುಭವಿಸಿದ್ದಾರೆ.

ಮಹಾರಾಷ್ಟ್ರ ಸರಕಾರವು ಸೋಂಕುಗಳನ್ನು ನಿಗ್ರಹಿಸಲು ಲಾಕ್ ಡೌನ್ ಬಗ್ಗೆ ನಿರ್ಧಾರ ತಗೆದುಕೊಳ್ಳಬಹುದು ಎಂದು ವರದಿಗಳು ತಿಳಿಸಿವೆ. ಹಲವು ರಾಜ್ಯಗಳಿಗೆ ಲಾಕ್ ಡೌನ್ ಭೀತಿ ಎದುರಾಗಿರುವುದು ಹೂಡಿಕೆದಾರರಲ್ಲಿ ಆಂತಕಕ್ಕೆ ಕಾರಣವಾಗಿದೆ.

ಏಷ್ಯಾದ ಮಾರುಕಟ್ಟೆಗಳು ಕೂಡ ಶೇ.1ರಷ್ಟು ಕುಸಿದವು.

ಶುಕ್ರವಾರ 209.63 ಲಕ್ಷ ಕೋ.ರೂ.ಇದ್ದ ಬಿಎಸ್ ಇ ಮಾರುಕಟ್ಟೆ ಬಂಡವಾಳೀಕರಣವು  ಬೆಳಗ್ಗೆ 9:30ಕ್ಕೆ 202.29 ಲಕ್ಷ ಕೋಟಿ ರೂ.ಗೆ ಇಳಿದಿದೆ. ಈ ಮೂಲಕ  7.33 ಲಕ್ಷ ಕೋಟಿ ರೂ.ಕುಸಿತವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News