ಒಂದೇ ದಿನ ಅತ್ಯಧಿಕ 1.8 ಲಕ್ಷ ಕೊರೋನ ಸೋಂಕು ಪ್ರಕರಣ ದಾಖಲು

Update: 2021-04-14 17:52 GMT

ಹೊಸದಿಲ್ಲಿ, ಎ. 14: ದೇಶದಲ್ಲಿ ಕಳೆದ ವರ್ಷ ಕೊರೋನ ಸಾಂಕ್ರಾಮಿಕ ರೋಗ ಹರಡಲು ಆರಂಭಿಸಿದ ಬಳಿಕ ಮೊದಲ ಬಾರಿಗೆ ಒಂದೇ ದಿನ ಅತ್ಯಧಿಕ 1,84,372 ಹೊಸ ಪ್ರಕರಣಗಳು ವರದಿಯಾಗಿವೆ.

ಈ ಹೊಸ ಪ್ರಕರಣಗಳೊಂದಿಗೆ ದೇಶದಲ್ಲಿ ಕೊರೋನ ಸೋಂಕಿನ ಪ್ರಕರಣಗಳ ಒಟ್ಟು ಸಂಖ್ಯೆ 1,38,73,825ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯ ಬುಧವಾರ ಬೆಳಗ್ಗೆ ಬಿಡುಗಡೆ ಮಾಡಿದೆ ದತ್ತಾಂಶ ತಿಳಿಸಿದೆ.

ಈ ನಡುವೆ ಕಳೆದ 24 ಗಂಟೆಗಳಲ್ಲಿ ಕೊರೋನ ಸೋಂಕಿನಿಂದ 1,027 ಮಂದಿ ಸಾವನ್ನಪ್ಪಿದ್ದಾರೆ. ಇದರೊಂದಿಗೆ ಕೊರೋನ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 1,72,085ಕ್ಕೆ ಏರಿಕೆಯಾಗಿದೆ.

ದೇಶದಲ್ಲಿ ಸಕ್ರಿಯ ಕೊರೋನ ಸೋಂಕಿನ ಪ್ರಕರಣಗಳ ಸಂಖ್ಯೆ 13,65,704 ದಾಖಲಾಗಿದೆ. ಇದುವರೆಗೆ 1,23,36,036 ಮಂದಿ ಗುಣಮುಖರಾಗಿದ್ದಾರೆ.

 ದೇಶದಲ್ಲಿ ಮಂಗಳವಾರ ಅತ್ಯಧಿಕ 1,61,736 ಕೊರೋನ ಸೋಂಕಿನ ಪ್ರಕರಣಗಳು ವರದಿಯಾಗಿತ್ತು. ಇದು ಇದುವರೆಗೆ ಕೊರೋನ ಸೋಂಕಿನ ಪ್ರಕರಣಗಳ ದಾಖಲೆಯನ್ನು ಮುರಿದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News