ಅಹ್ಮದಾಬಾದ್ ಸರಕಾರಿ ಕೋವಿಡ್ ಆಸ್ಪತ್ರೆಯಲ್ಲಿ ಹಾಸಿಗೆ ಕೊರತೆ: ಆ್ಯಂಬುಲೆನ್ಸ್ ನಲ್ಲಿ ಕಾಯುತ್ತಿರುವ ಕೊರೋನ ರೋಗಿಗಳು

Update: 2021-04-14 18:08 GMT

ಅಹ್ಮದಾಬಾದ್, ಎ. 14: ಅಹ್ಮದಾಬಾದ್ ನ ಅತಿ ದೊಡ್ಡ ಸರಕಾರಿ ಕೋವಿಡ್ ಆಸ್ಪತ್ರೆಯಲ್ಲಿ ಹಾಸಿಗೆಗಳ ಕೊರತೆಯಿಂದ ರೋಗಿಗಳು ಆಸ್ಪತ್ರೆಯ ಹೊರಗೆ ಆ್ಯಂಬುಲೆನ್ಸ್ ನಲ್ಲಿ ಕಾಯುತ್ತಿರುವ ಬಗ್ಗೆ ವರದಿಯಾಗಿದೆ.

ಗುಜರಾತ್ ನಲ್ಲಿ ಕೊರೋನ ಸೋಂಕಿನ ಪ್ರಕರಣಗಳ ಸಂಖ್ಯೆ ತೀವ್ರಗತಿಯಲ್ಲಿ ಏರುತ್ತಿರುವುದರಿಂದ ಆಸ್ಪತ್ರೆಯ 1200 ಹಾಸಿಗೆಗಳು ಈಗಾಗಲೇ ಭರ್ತಿಯಾಗಿವೆ. ಇದರಿಂದ ರೋಗಿಗಳು ಆಸ್ಪತ್ರೆಯ ಹೊರಗೆ ಆ್ಯಂಬುಲೆನ್ಸ್ನಲ್ಲಿ ಕಾಯುವ ಪರಿಸ್ಥಿತಿ ಉಂಟಾಗಿದೆ. ಹಾಸಿಗೆ ಲಭ್ಯವಿರದ ಹಿನ್ನೆಲೆಯಲ್ಲಿ ಅರೆ ವೈದ್ಯಕೀಯ ಸಿಬ್ಬಂದಿ ಆ್ಯಂಬುಲೆನ್ಸ್ನಲ್ಲೇ ರೋಗಿಗಳಿಗೆ ಆಕ್ಸಿಜನ್ ಸೌಲಭ್ಯ ಒದಗಿಸುತ್ತಿದ್ದಾರೆ.

ಸರತಿಯಲ್ಲಿ ನಿಂತ ಆ್ಯಂಬುಲೆನ್ಸ್ ನಂಬರ್ 15ರಲ್ಲಿ ಸ್ಥಳೀಯ ನಿವಾಸಿ ಫಲ್ಗುಣಿಬೆನ್ ಅವರ ಕೋರೋನ ಸೋಂಕಿತ ತಾಯಿ ಇದ್ದಾರೆ. ಹಾಸಿಗೆ ಕೊರತೆ ಬಗ್ಗೆ ಪ್ರತಿಕ್ರಿಯಿಸಿರುವ ಫಲ್ಗುಣಿಬೆನ್, ತಾನು ಅವರನ್ನು ಆಸ್ಪತ್ರೆಗೆ ದಾಖಲಿಸಲು ಕಾಯುತ್ತಿದ್ದೇನೆ ಎಂದಿದ್ದಾರೆ. ಎಪ್ರಿಲ್ 13ರಂದು ರಾತ್ರಿ 9.30ಕ್ಕೆ ಫಲ್ಗುಣಿ ಅವರು, ನಾವು ಕಳೆದ ಮೂರು ಗಂಟೆಯಲ್ಲಿ ಆ್ಯಂಬುಲೆನ್ಸ್ನಲ್ಲಿ ಸರತಿಯಲ್ಲಿ ಕಾಯುತ್ತಿದ್ದೇವೆ ಎಂದಿದ್ದರು.

ಅದೇ ಸಾಲಿನಲ್ಲಿರುವ ಇನ್ನೊಂದು ಆ್ಯಂಬಲೆನ್ಸ್ನಲ್ಲಿ ಇರುವವರು ಭವಿನ್ ಮೆಹ್ತಾ ಅವರ 80 ವರ್ಷದ ಅತ್ತೆ. ‘‘ಕೊರೋನ ಪಾಸಿಟಿವ್ ವರದಿ ಬಂದ ಬಳಿಕ ಅವರ ರಕ್ತದೊತ್ತಡದ ಮಟ್ಟ ಬೆಳಗ್ಗೆ ಶೇ. 60ಕ್ಕೆ ಇಳಿಕೆಯಾಗಿದೆ. ನಾವು ಮೂರು ಗಂಟೆಯಿಂದ ಕಾಯುತ್ತಿದ್ದೇವೆ’’ ಎಂದು ಭವಿನ್ ಮೆಹ್ತಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News