ಕೋಲ್ಕತಾ: ಕಾಂಗ್ರೆಸ್ ಅಭ್ಯರ್ಥಿ ಕೋವಿಡ್-19ಗೆ ಬಲಿ

Update: 2021-04-15 06:03 GMT

ಕೋಲ್ಕತಾ: ಪಶ್ಚಿಮಬಂಗಾಳ ಚುನಾವಣೆಯಲ್ಲಿ ಮುರ್ಷಿದಾಬಾದ್ ನ ಸಮಸರ್ಗಂಜ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ  ಕಾಂಗ್ರೆಸ್ ಅಭ್ಯರ್ಥಿ ರೆಝಾವುಲ್ ಹಕ್ ಅವರು ಕೋವಿಡ್-19ನಿಂದಾಗಿ ಗುರುವಾರ ಮೃತಪಟ್ಟಿದ್ದಾರೆ.

ಕೋವಿಡ್-19 ಸೋಂಕಿಗೆ ಒಳಗಾದ ಬಳಿಕ ಹಕ್ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಬಂಗಾಳ ಪ್ರದೇಶ ಕಾಂಗ್ರೆಸ್ ಕಾರ್ಯದರ್ಶಿ ರೋಹನ್ ಮಿತ್ರಾ ಅವರು ಗುರುವಾರ ಬೆಳಗ್ಗೆ ಟ್ವಿಟರ್ ಮೂಲಕ ಈ ಸುದ್ದಿಯನ್ನು ಹಂಚಿಕೊಂಡರು. 

ಮುರ್ಷಿದಾಬಾದ್ ಜಿಲ್ಲೆಯ ಸಮಸರ್ಗಂಜ್ ಅಸೆಂಬ್ಲಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರೆಝಾವುಲ್ ಹಕ್ ಕೊರೋನದಿಂದಾಗಿ ನಿಧನರಾದರು.  ಇದು ನಾವು ಎದುರಿಸುತ್ತಿರುವ ವಾಸ್ತವ. ಬಂಗಾಳಿ ಕ್ಯಾಲೆಂಡರ್ ನ ಮುಂದಿನ ಹೊಸ ವರ್ಷವನ್ನು ನೋಡಲು ಈ ವರ್ಷ ಬದುಕುಳಿಯಿರಿ. ಜೀವಂತವಾಗಿರಿ ಎಂದು ರೋಹನ್ ಮಿತ್ರಾ ಟ್ವೀಟಿಸಿದ್ದಾರೆ.

ರಾಜ್ಯದಲ್ಲಿ ಬುಧವಾರ ಒಂದೇ ದಿನ 5.892 ಹೊಸ ಕೇಸ್ ಗಳು ದಾಖಲಾಗಿದ್ದು, 24 ಜನರು ಮೃತಪಟ್ಟಿದ್ದಾರೆ. ಕಳೆದ 24 ಗಂಟೆಯಲ್ಲಿ 2,297 ರೋಗಿಗಳು ಚೇತರಿಸಿಕೊಂಡಿದ್ದಾರೆ.

ಪಶ್ಚಿಮಬಂಗಾಳದ ಸಮಸರ್ಗಂಜ್  ಅಸೆಂಬ್ಲಿ ಕ್ಷೇತ್ರಕ್ಕೆ ಎಪ್ರಿಲ್ 26ರಂದು ಏಳನೇ ಹಂತದಲ್ಲಿ ಚುನಾವಣೆ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News