ಎರಡು ಡೋಸ್‌ ಕೋವಿಡ್‌ ಲಸಿಕೆ ಪಡೆಯದಿದ್ದರೆ ಹಜ್‌ ಯಾತ್ರೆಗೆ ಅವಕಾಶವಿಲ್ಲ: ಭಾರತೀಯ ಹಜ್‌ ಕಮಿಟಿ

Update: 2021-04-16 09:35 GMT

ಮುಂಬೈ: ಎರಡು ಪ್ರಮಾಣದ ಕೋವಿಡ್‌ ಲಸಿಕೆಗಳನ್ನು ಹಾಕಿಸಿಕೊಳ್ಳದ ಹೊರತು ಯಾವುದೇ ಭಾರತೀಯ ಮುಸ್ಲಿಮರಿಗೆ ವಾರ್ಷಿಕ ಹಜ್‌ ಯಾತ್ರಗೆ ತೆರಳಲು ಅವಕಾಶ ನೀಡುವುದಿಲ್ಲ ಎಂದು ಭಾರತೀಯ ಹಜ್‌ ಸಮಿತಿ ತಿಳಿಸಿದೆ.

ಸೌದಿ ಅರೇಬಿಯಾದ ಆರೋಗ್ಯ ಸಚಿವಾಲಯ ಮತ್ತು ಜಿದ್ದಾದ ಭಾರತೀಯ ಕಾನ್ಸುಲೇಟ್‌ ಜನರಲ್‌ ರವರ ಇತ್ತೀಚಿಗಿನ ನಿರ್ದೇಶನಗಳನ್ನು ಅನುಸರಿಸಿ ಎಚ್‌ʼಸಿಐ ಮಖ್ಸೂದ್‌ ಅಹ್ಮದ್‌ ಖಾನ್‌ ಗುರುವಾರದಂದು ಈ ಘೋಷಣೆ ಹೊರಡಿಸಿದ್ದಾರೆ ಎಂದು ತಿಳಿದು ಬಂದಿದೆ.

"ಈಗಾಗಲೇ ಹಜ್‌ ಗೆ ಅರ್ಜಿ ಸಲ್ಲಿಸಿದವರು ಮೊದಲ ಡೋಸ್‌ ಕೋವಿಡ್‌ ವ್ಯಾಕಸಿನ್‌ ಅನ್ನು ಹಾಕಿಸಿಕೊಂಡರೆ, ಇಲ್ಲಿಂದ ಹಜ್‌ ಗೆ ತೆರಳುವ ಮೊದಲು ಇನ್ನೊಂದು ಪ್ರಮಾಣದ ಲಸಿಕೆ ಹಾಕಿಸಿಕೊಳ್ಳಬಹುದು" ಎಂದು ಅವರು ಸಲಹೆ ನೀಡಿದರು.

ಆದರೆ, ಈವರೆಗೆ ಸೌದಿ ಅರೇಬಿಯಾದ ಅಧಿಕಾರಿಗಳಿಂದ ಹಜ್ ತೀರ್ಥಯಾತ್ರೆಯ ಸ್ಥಿತಿಗತಿ ಕುರಿತು ಯಾವುದೇ ಅಧಿಕೃತ ಸಂವಹನ ನಡೆದಿಲ್ಲ ಮತ್ತು ಇಡೀ ಪ್ರಕ್ರಿಯೆಯು ಅವರ ಅನುಮೋದನೆಗೆ ಒಳಪಟ್ಟಿರುತ್ತದೆ ಎಂದು ಖಾನ್ ಸ್ಪಷ್ಟಪಡಿಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News