ಕೊರೋನದ 2ನೆ ಅಲೆ ನಿಭಾಯಿಸಲು ನಾವು ಬೇರೆ ದೇಶಗಳಿಂದ ಕಲಿಯಬೇಕು:ಭೂಪೇಶ್ ಬಘೇಲ್

Update: 2021-04-18 12:18 GMT

ಹೊಸದಿಲ್ಲಿ: ಕೊರೋನದ ಎರಡನೇ ಅಲೆಗೆ ತುತ್ತಾಗಿರುವ ದೇಶಗಳಿಂದ ಕಲಿಯುವ ಮೂಲಕ ಭಾರತವು ಕೊರೋನವೈರಸ್ ಬಿಕ್ಕಟ್ಟನ್ನು ಉತ್ತಮವಾಗಿ ನಿಭಾಯಿಸಬಹುದು ಎಂದು ಛತ್ತೀಸ್ ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅಭಿಪ್ರಾಯಪಟ್ಟಿದ್ದಾರೆ.

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 1,501 ಜನರು ಸಾವನ್ನಪ್ಪಿದ್ದಾರೆ.

ಭಾರತದಾದ್ಯಂತ ಕೊರೋನವೈರಸ್ ಸೋಂಕುಗಳು ಹೆಚ್ಚುತ್ತಿರುವ ಮಧ್ಯೆ ವಿದೇಶಿ ನಿರ್ಮಿತ ಲಸಿಕೆಗಳಿಗೆ ತುರ್ತು ಅನುಮೋದನೆಗಳನ್ನು ತ್ವರಿತವಾಗಿ ನೀಡುವ ಅಗತ್ಯವನ್ನು ಒತ್ತಿ ಹೇಳಿದರು.

"ಕೊರೋನದ ಎರಡನೇ ಅಲೆಯು  ಹೆಚ್ಚು ಆತಂಕಕಾರಿಯಾಗಿದೆ. ಸೋಂಕಿತರ ಸಂಖ್ಯೆಗಳು ವೇಗವಾಗಿ ಏರುತ್ತಿವೆ. ವಯಸ್ಸಾದವರಲ್ಲದೆ, ಕೋವಿಡ್ ಸೋಂಕಿತ ಯುವಕರು ಸಹ ಸಾಯುತ್ತಿದ್ದಾರೆ, ಇದು ಈಗಲೂ ಒಂದು ಭಾರೀ ಕಳವಳಕಾರಿಯಾಗಿದೆ. ನಾವು ಇತರ ದೇಶಗಳಿಂದ ಕಲಿಯಬೇಕಾಗಿತ್ತು. ದಿಲ್ಲಿಯಲ್ಲಿ ಕುಳಿತುಕೊಳ್ಳುವ ಜನರು ಇದನ್ನು ನೋಡಬೇಕಾಗಿದೆ ಹಾಗೂ  ಜನರಿಗೆ ನಿರ್ದೇಶನ ನೀಡಬೇಕು "ಎಂದು ಭೂಪೇಶ್ ಬಘೇಲ್  ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರ ಲಸಿಕೆ ರಾಜತಾಂತ್ರಿಕ ನೀತಿಯನ್ನು ಬಘೇಲ್ ಟೀಕಿಸಿದರು, ಕೋವಿಡ್ ನಿರೋಧಕ ಲಸಿಕೆಗಳನ್ನು  ಲಕ್ಷಾಂತರ ಪ್ರಮಾಣದಲ್ಲಿ ಹಲವಾರು ದೇಶಗಳಿಗೆ ಉಡುಗೊರೆಯಾಗಿ ನೀಡಲಾಗಿದೆ. ನೀವು ರೆಮ್ಡೆಸಿವಿರ್ ಅನ್ನು ವಿವಿಧ ದೇಶಗಳಿಗೆ ಕಳುಹಿಸುತ್ತಿದ್ದೀರಿ. ನಾವು 45 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಲಸಿಕೆ ಹಾಕಬೇಕಾಗಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News