ದೇಶದಲ್ಲಿ ಕೋವಿಡ್ ಉಲ್ಬಣ: ಪ್ರಧಾನಿ ಮೋದಿಗೆ ಮನಮೋಹನ್ ಸಿಂಗ್ ಪತ್ರದ ಮೂಲಕ ಸಲಹೆ

Update: 2021-04-18 16:33 GMT

ಹೊಸದಿಲ್ಲಿ,ಎ.18: ದೇಶದಲ್ಲಿ ಉಲ್ಬಣಗೊಂಡಿರುವ ಕೋವಿಡ್-19 ಸ್ಥಿತಿಯ ಬಗ್ಗೆ ರವಿವಾರ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರವನ್ನು ಬರೆದಿರುವ ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರು,ಲಸಿಕೆ ನೀಡಿಕೆಯನ್ನು ಹೆಚ್ಚಿಸುವುದು ಸಾಂಕ್ರಾಮಿಕದ ವಿರುದ್ಧ ಹೋರಾಟದಲ್ಲಿ ನಿರ್ಣಾಯಕವಾಗಿದೆ ಎಂದು ಒತ್ತಿ ಹೇಳಿದ್ದಾರೆ.

ಎಷ್ಟು ಜನರಿಗೆ ಲಸಿಕೆ ನೀಡಲಾಗಿದೆ ಎನ್ನುವುದು ಮುಖ್ಯವಲ್ಲ,ದೇಶದ ಒಟ್ಟು ಜನಸಂಖ್ಯೆಯಲ್ಲಿ ಎಷ್ಟು ಜನರಿಗೆ ಲಸಿಕೆ ನೀಡಲಾಗಿದೆ ಎನ್ನುವುದನ್ನು ನೋಡಬೇಕು. ಲಸಿಕೆ ನೀಡಿಕೆ ಪ್ರಯತ್ನವನ್ನು ಹೆಚ್ಚಿಸುವುದು ಕೋವಿಡ್-19 ವಿರುದ್ಧದ ನಮ್ಮ ಹೋರಾಟದಲ್ಲಿ ಮುಖ್ಯವಾಗಬೇಕು ಎಂದು ಪತ್ರದಲ್ಲಿ ಬರೆದಿರುವ ಸಿಂಗ್,ಈಗ ಜನಸಂಖ್ಯೆಯ ಸಣ್ಣ ಪ್ರಮಾಣಕ್ಕೆ ಲಸಿಕೆ ನೀಡಲಾಗಿದೆ. ಸರಿಯಾದ ನೀತಿ ನಿರೂಪಣೆಯೊಂದಿಗೆ ನಾವು ಕಡಿಮೆ ಸಮಯದಲ್ಲಿ ಹೆಚ್ಚಿನ ಸಾಧನೆಯನ್ನು ಮಾಡಬಹುದಾಗಿದೆ. ಸಾಂಕ್ರಾಮಿಕದ ವಿರುದ್ಧದ ಹೋರಾಟದಲ್ಲಿ ನಾವು ಮಾಡಲೇಬೇಕಿರುವ ಹಲವಾರು ಕಾರ್ಯಗಳಿವೆ,ಆದರೆ ಲಸಿಕೆ ನೀಡಿಕೆ ಕಾರ್ಯಕ್ರಮವನ್ನು ವೇಗಗೊಳಿಸುವುದು ಎಲ್ಲಕ್ಕೂ ಮುಖ್ಯವಾಗಿದೆ ಎಂದಿದ್ದಾರೆ.

ತಾನು ಸದಾ ನಂಬಿಕೊಂಡು ಬಂದಿರುವ ಮತ್ತು ಕಾರ್ಯರೂಪಕ್ಕೆ ತಂದಿರುವ ರಚನಾತ್ಮಕ ಸಹಕಾರದ ಸ್ಫೂರ್ತಿಯಲ್ಲಿ ಪರಿಗಣನೆಗಾಗಿ ತನ್ನ ಸಲಹೆಗಳನ್ನು ಮುಂದಿಡುತ್ತಿರುದಾಗಿ ಅವರು ಪತ್ರದಲ್ಲಿ ತಿಳಿಸಿದ್ದಾರೆ.

ಮುಂದಿನ ಆರು ತಿಂಗಳುಗಳಿಗಾಗಿ ಎಷ್ಟು ಡೋಸ್ ಲಸಿಕೆಗಾಗಿ ಬೇಡಿಕೆಯನ್ನು ಸಲ್ಲಿಸಲಾಗಿದೆ ಮತ್ತು ಈ ಪೈಕಿ ಎಷ್ಟು ಡೋಸ್‌ಗಳ ಪೂರೈಕೆಯನ್ನು ಸ್ವೀಕರಿಸಲಾಗಿದೆ ಎನ್ನುವುದನ್ನು ಕೇಂದ್ರವು ಬಹಿರಂಗಗೊಳಿಸಬೇಕು ಎಂದಿರುವ ಸಿಂಗ್,ರಾಜ್ಯಗಳಿಗೆ ಲಸಿಕೆಗಳನ್ನು ಹೇಗೆ ವಿತರಿಸಲಾಗುತ್ತದೆ ಎನ್ನುವುದನ್ನು ಸರಕಾರವು ತಿಳಿಸಬೇಕು ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News