ಕೊರೋನ ಸೋಂಕಿನಿಂದ ರಕ್ಷಣೆಗೆ ಎನ್ 95 ಮಾಸ್ಕ್ ಉತ್ತಮ: ತಜ್ಞರ ಸಲಹೆ

Update: 2021-04-18 18:06 GMT

ಹೊಸದಿಲ್ಲಿ, ಎ.18: ಕೋವಿಡ್-19 ಗಾಳಿಯ ಮೂಲಕ ಪ್ರಸಾರವಾಗುವ ವೈರಸ್ ಆಗಿದೆ ಎಂಬುದು ಇತ್ತೀಚಿನ ಅಧ್ಯಯನದಿಂದ ತಿಳಿದುಬಂದಿದ್ದು ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಎನ್95 ಅಥವಾ ಕೆಎನ್95 ಮಾಸ್ಕ್ ಧರಿಸುವ ಅಗತ್ಯವಿದೆ ಎಂದು ಸಾಂಕ್ರಾಮಿಕ ರೋಗತಜ್ಞ ಡಾ ಫಹಿಂ ಯೂನುಸ್ ಹೇಳಿದ್ದಾರೆ.

ಗಾಳಿಯ ಮೂಲಕ ಹರಡುವ ವೈರಸ್‌ಗಳಿಂದ ಹಾನಿಯಾಗದಂತೆ ತಡೆಯಲು ಎರಡು ಎನ್95 ಅಥವಾ ಕೆಎನ್ 95 ಮಾಸ್ಕ್‌ಗಳನ್ನು ಖರೀದಿಸಿ ದಿನಕ್ಕೊಂದರಂತೆ ಬಳಸಬೇಕು. ಮಾಸ್ಕ್‌ಗಳಿಗೆ ಹಾನಿಯಾಗದಿದ್ದರೆ ಒಂದು ವಾರದವರೆಗೆ ಮರು ಬಳಕೆ ಮಾಡಬಹುದು ಎಂದವರು ಸಲಹೆ ನೀಡಿದ್ದಾರೆ.

ಎಸ್‌ಎಆರ್‌ಎಸ್-ಸಿಒವಿ-2(ನೋವೆಲ್ ಕೊರೊನವೈರಸ್) ಎಂಬುದು ಗಾಳಿಯ ಮೂಲಕ ಹರಡುವ ಸೋಂಕು ಆಗಿದ್ದು ಮನುಷ್ಯ ಸೀನಿದಾಗ ಅಥವಾ ಕೆಮ್ಮಿದಾಗ ಹನಿಯ ರೂಪದಲ್ಲಿ ಗಾಳಿಯನ್ನು ಸೇರಿ ಸುಮಾರು 3 ಗಂಟೆಯವರೆಗೆ ಸಕ್ರಿಯವಾಗಿರುತ್ತದೆ ಎಂದು ಬ್ರಿಟನ್, ಅಮೆರಿಕ ಮತ್ತು ಕೆನಡಾದ 6 ಸಾಂಕ್ರಾಮಿಕ ರೋಗತಜ್ಞರನ್ನೊಳಗೊಂಡ ಲ್ಯಾನ್ಸೆಟ್ ಕೋವಿಡ್-19 ಸಮಿತಿ ಇತ್ತೀಚೆಗೆ ನಡೆಸಿದ ಅಧ್ಯಯನದ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಗಾಳಿಯ ಮೂಲಕ ಹರಡುವಿಕೆ ಎಂದರೆ ವೈರಸ್ ಗಾಳಿಯಲ್ಲಿ ಕೆಲ ಗಂಟೆಗಳವರೆಗೆ ಸಕ್ರಿಯವಾಗಿರುತ್ತದೆ ಎಂದರ್ಥ. ಇದು ಹೆಚ್ಚಾಗಿ ಒಳಾಂಗಣ ಸ್ಥಳಗಳಲ್ಲಿ ಕಂಡುಬರುತ್ತದೆ. ಪಾರ್ಕ್ ಮತ್ತು ಬೀಚ್‌ಗಳು ಮಾಸ್ಕ್ ಧರಿಸದೆ ಇರಬಹುದಾದ ಸುರಕ್ಷಿತ ಪ್ರದೇಶಗಳಾಗಿವೆ. ಆದರೆ ಇಲ್ಲಿ ಇಬ್ಬರು ವ್ಯಕ್ತಿಗಳ ಮಧ್ಯೆ ಕನಿಷ್ಟ 6 ಅಡಿಗಳ ಅಂತರದ ಅಗತ್ಯವಿದೆ ಎಂದು ಯೂನುಸ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News