ಕೋವಿಡ್ ಪರಿಸ್ಥಿತಿ ಕುರಿತು ಚರ್ಚೆಗೆ ಎರಡು ದಿನಗಳ ಸಂಸತ್ತಿನ ವಿಶೇಷ ಅಧಿವೇಶನಕ್ಕೆ ಶಿವಸೇನೆ ಒತ್ತಾಯ

Update: 2021-04-19 06:47 GMT

ಹೊಸದಿಲ್ಲಿ: ಕೋವಿಡ್-19ನಿಂದ ಉಂಟಾಗಿರುವ ಹಿಂದೆಂದೂ ಕಾಣದ ಪರಿಸ್ಥಿತಿಯನ್ನು ಚರ್ಚಿಸಲು ಎರಡು ದಿನಗಳ ಸಂಸತ್ತಿನ ವಿಶೇಷ ಅಧಿವೇಶನಕ್ಕೆ ಶಿವಸೇನೆ ಕರೆ ನೀಡಿದೆ.

ಈಗಿನ ಪರಿಸ್ಥಿತಿಯನ್ನು ಬಹುತೇಕ ಯುದ್ಧ ರೀತಿಯಲ್ಲಿದೆ ಎಂದು ಹೇಳಿದ ಶಿವಸೇನೆಯ ರಾಜ್ಯಸಭಾ ಸಂಸದ ಸಂಜಯ್ ರಾವತ್,  ಎಲ್ಲೆಡೆ ಗೊಂದಲ ಹಾಗೂ ಉದ್ವಿಗ್ನತೆ ಇದೆ ಎಂದು ಹೇಳಿದರು.

2020ರ ಜನವರಿಯಲ್ಲಿ ಸಾಂಕ್ರಾಮಿಕ ರೋಗವು ಭಾರತದಲ್ಲಿ ಅಪ್ಪಳಿಸಿದಾಗಿನಿಂದ ಮಹಾರಾಷ್ಟ್ರವು ದೇಶದಲ್ಲಿ ಹೆಚ್ಚು ಕೊರೋನ ಬಾಧಿತ ರಾಜ್ಯಗಳಲ್ಲಿ ಒಂದಾಗಿದೆ.  ಕಳೆದ ಕೆಲವು ವಾರಗಳಿಂದ ದೇಶವನ್ನು ಕಂಗೆಡಿಸಿರುವ ಕೋವಿಡ್-19 ಬಿಕ್ಕಟ್ಟಿನ ಎರಡನೇ ಅಲೆಯು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿದೆ.

ಈಗಿನ ಹಿಂದೆಂದೂ ಕಾಣದ ಪರಿಸ್ಥಿತಿ ಬಹುತೇಕ ಯುದ್ಧದ ಸ್ಥಿತಿಯಾಗಿದೆ. ಎಲ್ಲೆಡೆ ಅತ್ಯಂತ ಗೊಂದಲ, ಉದ್ವಿಗ್ನತೆ ಇದೆ. ಹಾಸಿಗೆಗಳಿಲ್ಲ, ಆಮ್ಲಜನಕವಿಲ್ಲ ,  ವ್ಯಾಕ್ಸಿನೇಶನ್ ಇಲ್ಲ! ಇಂತಹ ಪರಿಸ್ಥಿತಿಯನ್ನು ಚರ್ಚಿಸಲು ಕನಿಷ್ಠ ಎರಡು ದಿನಗಳ ಸಂಸತ್ತಿನ ವಿಶೇಷ ಅಧಿವೇಶನ ಕರೆಯಬೇಕೆಂದು ರಾವತ್ ಟ್ವೀಟಿಸಿದ್ದಾರೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News