ದಿಲ್ಲಿಯ ಎರಡು ಪ್ರಮುಖ ಆಸ್ಪತ್ರೆಗಳಲ್ಲಿ ಆಮ್ಲಜನಕದ ತೀವ್ರ ಕೊರತೆ

Update: 2021-04-20 14:38 GMT

ಹೊಸದಿಲ್ಲಿ: ದಿಲ್ಲಿಯ ಎರಡು ಪ್ರಮುಖ ಆಸ್ಪತ್ರೆಗಳಾದ ಮ್ಯಾಕ್ಸ್ ಆಸ್ಪತ್ರೆ ಮತ್ತು ಗಂಗಾ ರಾಮ್ ಆಸ್ಪತ್ರೆಗಳು ತಮ್ಮ ಆಮ್ಲಜನಕದ ಪೂರೈಕೆ ಕೆಲವೇ ಗಂಟೆಗಳವರೆಗೆ ಇರುತ್ತದೆ ಎಂದು ವರದಿ ಮಾಡಿವೆ. ದಿಲ್ಲಿಯಲ್ಲಿ ಸೋಮವಾರ ದೈನಂದಿನ ಸೋಂಕಿತರ ಸಂಖ್ಯೆ  32,000 ತಲುಪಿದ ಕಾರಣ ಪರಿಸ್ಥಿತಿಯನ್ನು ನಿಭಾಯಿಸಲು ಹೆಣಗಾಡುತ್ತಿರುವಾಗ ಈ ಬಿಕ್ಕಟ್ಟು ಉಂಟಾಗಿದೆ.

ತನ್ನ ಅಮ್ಲಜನಕ ಸರಬರಾಜಿನಲ್ಲಿ ಅಡ್ಡಿಯಾಗಿದ್ದು, ಇದು ಕೇವಲ ಆರರಿಂದ 12 ಗಂಟೆಗಳ ತನಕ ಮಾತ್ರ ಆಮ್ಲಜನಕವನ್ನು ಹೊಂದಿದೆ ಎಂದು ಹೇಳಿದೆ. ಸರ್ ಗಂಗಾ ರಾಮ್ ಆಸ್ಪತ್ರೆಯ ಅಧಿಕಾರಿಗಳು ತಮ್ಮ ಸರಬರಾಜು ಸುಮಾರು ಎಂಟು ಗಂಟೆಗಳ ಕಾಲ ನಡೆಯುತ್ತದೆ ಎಂದು ಹೇಳಿದ್ದಾರೆ.

 "ನಾವು ಹೊಸ ಆಮ್ಲಜನಕ ಪೂರೈಕೆಯನ್ನು ಪಡೆಯುವ ವಿಶ್ವಾಸದಲ್ಲಿದ್ದೇವೆ. ಯಾವುದೇ ರೋಗಿಯನ್ನು ಆಸ್ಪತ್ರೆಗಳಿಂದ ಹೊರಗೆ ಸ್ಥಳಾಂತರಿಸಲಾಗುವುದಿಲ್ಲ" ಎಂದು ಮ್ಯಾಕ್ಸ್ ಆಸ್ಪತ್ರೆಯ ಅಧಿಕಾರಿಗಳು ಹೇಳಿದ್ದಾರೆ.

 ಎರಡೂ ಆಸ್ಪತ್ರೆಗಳಲ್ಲಿನ ಸಮಸ್ಯೆಯನ್ನು ಬಗೆಹರಿಸಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದು ಸರಕಾರಿ ಮೂಲಗಳು ತಿಳಿಸಿವೆ.

"ದಿಲ್ಲಿಯಲ್ಲಿ ಗಂಭೀರ ಆಮ್ಲಜನಕ ಬಿಕ್ಕಟ್ಟು ಮುಂದುವರೆದಿದೆ. ದಿಲ್ಲಿಗೆ ತುರ್ತಾಗಿ ಆಮ್ಲಜನಕವನ್ನು ಒದಗಿಸುವಂತೆ ನಾನು ಮತ್ತೆ ಕೇಂದ್ರವನ್ನು ಒತ್ತಾಯಿಸುತ್ತೇನೆ. ಕೆಲವು ಆಸ್ಪತ್ರೆಗಳಲ್ಲಿ ಕೆಲವೇ ಗಂಟೆಗಳ ಆಮ್ಲಜನಕ ಉಳಿದಿದೆ" ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಈ ಹಿಂದೆ ಟ್ವೀಟ್ ಮಾಡಿದ್ದಾರೆ.

ದಿಲ್ಲಿಯ ಆಕ್ಸಿಜನ್ ಬಿಕ್ಕಟ್ಟಿನ ವಿಚಾರ ದಿಲ್ಲಿ ಹೈಕೋರ್ಟ್ ಗೆ ತಲುಪಿದ್ದು,  ಕೈಗಾರಿಕಾ ಬಳಕೆಗಾಗಿ ಬಳಸುವ ಅಮ್ಲ ಜನಕವನ್ನು ಸ್ಥಗಿತಗೊಳಿಸಿ ಕೋವಿಡ್ ರೋಗಿಗಳಿಗೆ ನೀಡಲು ಎಪ್ರಿಲ್ 22ರ ತನಕ ಏಕೆ ಕಾಯುತ್ತಿದೆ ಎಂದು ಕೇಂದ್ರ ಸರಕಾರವನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದ್ದು, ಆರ್ಥಿಕ ಹಿತಾಸಕ್ತಿಗಳು ಮಾನವ ಜೀವನವನ್ನು ಅತಿಕ್ರಮಿಸಲು ಸಾಧ್ಯವಿಲ್ಲ. ಇಲ್ಲದಿದ್ದರೆ ನಾವು ವಿಪತ್ತಿನತ್ತ ಸಾಗುತ್ತಿದ್ದೇವೆ" ಎಂದು ನ್ಯಾಯಾಲಯ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News