ಮಧ್ಯ ಪ್ರದೇಶದ ಕೋವಿಡ್ ಆಸ್ಪತ್ರೆಯಿಂದ ಆಕ್ಸಿಜನ್ ಸಿಲಿಂಡರ್ ಲೂಟಿ

Update: 2021-04-21 11:49 GMT
ಸಾಂದರ್ಭಿಕ ಚಿತ್ರ

ಭೋಪಾಲ್ : ಮಧ್ಯ ಪ್ರದೇಶದಲ್ಲಿ ಆಕ್ಸಿಜನ್ ಕೊರತೆಯಿಲ್ಲ, ಹೆಚ್ಚುವರಿ ಆಕ್ಸಿಜನ್ ಪೂರೈಕೆಯಿದೆ ಎಂದು ಅಲ್ಲಿನ ಸರಕಾರ ಹೇಳಿಕೊಂಡ ದಿನದಂದೇ  ಕೋವಿಡ್ ಆಸ್ಪತ್ರೆಯಾಗಿರುವ ದಮೋಹ್ ಜಿಲ್ಲಾಸ್ಪತ್ರೆಯ ಆಕ್ಸಿಜನ್ ಸ್ಟೋರ್ ರೂಮ್‍ನಿಂದ ಆಕ್ಸಿಜನ್ ಸಿಲಿಂಡರುಗಳ ಲೂಟಿಯ ಚಿತ್ರಣ ವೀಡಿಯೋದಲ್ಲಿ ಸೆರೆಯಾಗಿದೆ.

ಈ ಘಟನೆಯ ಬೆನ್ನಲ್ಲೇ ಆಸ್ಪತ್ರೆಯ ವೈದ್ಯರು ಹಾಗೂ ಇತರ ಸಿಬ್ಬಂದಿಗಳು ಸ್ವಲ್ಪ ಹೊತ್ತು ಕೆಲಸ ಸ್ಥಗಿತಗೊಳಿಸುವುದು ಅನಿವಾರ್ಯವಾಯಿತು. ಪೊಲೀಸರು ಸ್ಥಳಕ್ಕೆ ಆಗಮಿಸಿ  ಭದ್ರತೆ ಒದಗಿಸಿದ ನಂತರ ಪರಿಸ್ಥಿತಿ ಸಹಜತೆಗೆ ಮರಳಿದೆ.

ಇಂತಹುದೇ ಘಟನೆ ಸೋಮವಾರ ಕೂಡ ನಡೆದಿತ್ತು. ಆಗ ಕೂಡ ಪೊಲೀಸರಿಗೆ ದೂರು ನೀಡಲಾಗಿತ್ತಾದರೂ ಯಾರ ವಿರುದ್ಧವೂ ಕ್ರಮ ಕೈಗೊಳ್ಳಲಾಗಿರಲಿಲ್ಲ.

ಇಂತಹ ಘಟನೆಗಳು ನಡೆದರೆ ಕೆಲಸ ನಿರ್ವಹಿಸುವುದು ಬಹಳ ಕಷ್ಟವಾಗಲಿದೆ ಎಂದು ಆಸ್ಪತ್ರೆಯ ಸಿವಿಲ್ ಸರ್ಜನ್ ಡಾ ಮಮತಾ ತಿಮೋತಿ ಹೇಳಿದ್ದಾರೆ.

ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಕಲೆಕ್ಟರ್ ಆಶ್ವಾಸನೆ ನೀಡಿದ್ದಾರೆ. ಆದರೆ ಇಲ್ಲಿಯ ತನಕ ಯಾರನ್ನೂ ಬಂಧಿಸಲಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News