ಪಶ್ಚಿಮಬಂಗಾಳದಲ್ಲಿ ಇಂದು ಆರನೇ ಹಂತದ ಮತದಾನ

Update: 2021-04-22 05:21 GMT

ಕೋಲ್ಕತಾ: ಪಶ್ಚಿಮ ಬಂಗಾಳದ ನಾಲ್ಕು ಜಿಲ್ಲೆಗಳಲ್ಲಿನ 43 ಕ್ಷೇತ್ರಗಳಿಗೆ ಗುರುವಾರ ಆರನೇ ಹಂತದ ಮತದಾನ ಆರಂಭವಾಗಿದೆ. 

ಆಡಳಿತಾರೂಢ ತೃಣಮೂಲ ಕಾಂಗ್ರೆಸ್ 2016ರ ಚುನಾವಣೆಯಲ್ಲಿ ಗುರುವಾರ ನಡೆಯುತ್ತಿರುವ 43 ಸೀಟುಗಳ ಪೈಕಿ 32ರಲ್ಲಿ ಜಯ ಸಾಧಿಸಿದ್ದು, ಕಾಂಗ್ರೆಸ್ 7 ಹಾಗೂ ಎಡಪಕ್ಷಗಳು 4 ಸೀಟುಗಳನ್ನು ಗೆದ್ದುಕೊಂಡಿದ್ದವು.

ಈಬಾರಿಯ ಚುನಾವಣೆಯಲ್ಲಿ ಕೃಷ್ಣನಗರ ಉತ್ತರ ಕ್ಷೇತ್ರದಿಂದ ಟಿಎಂಸಿಯಿಂದ ಬಿಜೆಪಿಗೆ ಪಕ್ಷಾಂತರವಾಗಿರುವ ಮುಕುಲ್ ರಾಯ್ ಸ್ಪರ್ಧಿಸುತ್ತಿದ್ದಾರೆ. ಈ ಕ್ಷೇತ್ರ ಹೆಚ್ಚು ಗಮನ ಸೆಳೆದಿದೆ. ಇಂದು ಕೃಷ್ಣನಗರ ಕ್ಷೇತ್ರದಲ್ಲಿ ಮತದಾನ ನಡೆಯುತ್ತಿದೆ.

ಬಂಗಾಳದಲ್ಲಿ ಬೆಳಗ್ಗೆ 10 ಗಂಟೆಯ ತನಕ ಶೇ,17.19ರಷ್ಟು ಮತದಾನವಾಗಿದೆ. 
ನಾಡಿಯಾದ ಮತಗಟ್ಟೆ ಬಳಿ ಸಿಆರ್ ಪಿಎಫ್ ಯೋಧರು ತನ್ನ ಪಕ್ಷದ ಕಾರ್ಯಕರ್ತರಿಗೆ ಥಳಿಸಿದ್ದಾರೆ ಎಂದು ಟಿಎಂಸಿ ಆರೋಪಿಸಿದೆ.

ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಮುಕುಲ್ ರಾಯ್ ಅವರು ಕಾಂಚರಪಾರಾದಲ್ಲಿ ಮತ ಚಲಾಯಿಸಿದರು.

ಬಂಗಾಳದ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ವಿನಂತಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News