×
Ad

ರೈಲ್ವೆ ಹಳಿಯಿಂದ ಮಗುವನ್ನು ರಕ್ಷಿಸಿದ ಹೀರೋ ಮಯೂರ್ ಶೆಲ್ಕೆಗೆ ಜಾವಾ ಸಂಸ್ಥೆಯಿಂದ ಹೊಚ್ಚ ಹೊಸ ಬೈಕ್ ಕೊಡುಗೆ

Update: 2021-04-24 19:42 IST
Photo: Twitter

ಮುಂಬೈ: ಮುಂಬೈ ರೈಲು ನಿಲ್ದಾಣದಲ್ಲಿ ಹಳಿ ಮೇಲೆ ಬಿದ್ದ ಆರು ವರ್ಷದ ಬಾಲಕನನ್ನು ತನ್ನ ಜೀವದ ಹಂಗು ತೊರೆದು ರಕ್ಷಿಸಿದ್ದ ರೈಲ್ವೇ ಪಾಯಿಂಟ್‍ಮ್ಯಾನ್ ಮಯೂರ್ ಶೆಲ್ಕೆ ಅವರ ಸಾಹಸವನ್ನು ಕೊಂಡಾಡಿ  ರೈಲ್ವೆ ಇಲಾಖೆ  ರೂ 50,000 ನಗದು ಬಹುಮಾನ ನೀಡಿದ ಬೆನ್ನಲ್ಲೇ ಈಗ ಮಹೀಂದ್ರ ಸಂಸ್ಥೆ ಒಡೆತನದ ಜಾವಾ ಮೋಟಾರ್ ಸೈಕಲ್ಸ್ ಅವರಿಗೆ ಜಾವಾ ಫೋರ್ಟಿ ಟೂ ಗೋಲ್ಡನ್ ಸ್ಟ್ರೈಪ್ಸ್ ನೆಬುಲಾ ಬ್ಲೂ ಮೋಟಾರ್ ಬೈಕ್ ನೀಡಿ ಗೌರವಿಸಿದೆ.

ಕಂಪೆನಿಯ #ಜಾವಾಹೀರೋಸ್ ಕಾರ್ಯಕ್ರಮದನ್ವಯ ಶೆಲ್ಕೆ ಅವರಿಗೆ ಈ ಬೈಕ್ ನೀಡಲಾಗಿದೆ ಎಂದು ಸಂಸ್ಥೆ ಹೇಳಿದೆ.  ಕಂಪೆನಿ ಈ ಕುರಿತಂತೆ ಟ್ವೀಟ್ ಮಾಡಿ ಶೆಲ್ಕೆ ಅವರಿಗೆ ಮೋಟಾರ್ ಸೈಕಲ್ ಹಸ್ತಾಂತರಿಸುವ ಛಾಯಾಚಿತ್ರ ಕೂಡ ಪೋಸ್ಟ್ ಮಾಡಿದೆ.

"ಪಾಯಿಂಟ್ಸ್ ಮ್ಯಾನ್ ಮಯೂರ್ ಶೆಲ್ಕೆ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿ #ಜಾವಾಹೀರೋಸ್ ಕಾರ್ಯಕ್ರಮದ ಭಾಗವಾಗಿ ಅವರ ಸಾಹಸ ಮತ್ತು ಧೈರ್ಯಕ್ಕೆ  ಹಾಗೂ ನಿಸ್ಸ್ವಾರ್ಥ ಸೇವೆಗೆ ಜಾವಾ ಫೋರ್ಟಿ ಟೂ ಗೋಲ್ಡನ್ ಸ್ಟ್ರೈಪ್ಸ್ ನೆಬುಲಾ ಬ್ಲೂ ಅವರಿಗೆ ಹಸ್ತಾಂತರಿಸಲು ಹೆಮ್ಮೆ ಪಡುತ್ತದೆ. ನಿಮಗೆ ಹೆಚ್ಚು ಶಕ್ತಿ ದೊರೆಯಲಿ ಮಯೂರ್ ಹಾಗೂ ಜಾವಾ ಕುಟುಂಬದಿಂದ ನಿಮಗೆ ಅನಂತಾನಂತ ಗೌರವಗಳು" ಎಂದು ಸಂಸ್ಥೆ ತನ್ನ ಟ್ವೀಟ್‍ನಲ್ಲಿ ಹೇಳಿದೆ.

ಜಾವಾ ಮೋಟಾರ್ ಸೈಕಲ್ಸ್ ಸಹ ಸ್ಥಾಪಕ ಅನುಪಮ್ ತರೇಜಾ ಅವರು ಕೂಡ ಟ್ವೀಟ್ ಮಾಡಿ ಮಯೂರ್ ಶೆಲ್ಕೆ ಅವರು ಮಗುವನ್ನು ರಕ್ಷಿಸುವ ಹಾಗೂ ಈಗಾಗಲೇ ವೈರಲ್ ಆಗಿರುವ ವೀಡಿಯೋ ಶೇರ್ ಮಾಡಿದ್ದಾರಲ್ಲದೆ ರೈಲ್ವೆ ನೀಡಿದ್ದ ರೂ 50,000 ನಗದು ಬಹುಮಾನದ ಅರ್ಧ ಮೊತ್ತವನ್ನು ತಾವು ರಕ್ಷಿಸಿದ ಮಗು ಹಾಗೂ ಆತನ ತಾಯಿಗೆ ಅವರು ನೀಡುತ್ತಿದ್ದಾರೆ ಎಂದು ತಿಳಿದು ಅತ್ಯಂತ ಖುಷಿಯಾಯಿತು ಎಂದು ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News